ವ್ಯಕ್ತಿಯ ಮೇಲೆ ಕೋಪ: ಮಕ್ಕಳನ್ನೇ ಹಲ್ಲೆ ಮಾಡಿ ಕೊಂದ ಕ್ಷೌರಿಕ..!

ಉತ್ತರ ಪ್ರದೇಶದ ಬದೌನ್ ನ ಬಾಬಾ ಕಾಲೋನಿ ಪ್ರದೇಶದಲ್ಲಿ ಭೀಭತ್ಸ ಘಟನೆಯೊಂದು ನಡೆದಿದೆ. ಆರೋಪಿ ಕ್ಷೌರಿಕ ಸಾಜಿದ್ (22) ಎಂಬಾತ ಮೂವರು ಸಹೋದರರ ಮೇಲೆ ಕೊಡಲಿಯಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ.
ಮೃತರನ್ನು ಆಯುಷ್ (12), ಅಹಾನ್ ಅಲಿಯಾಸ್ ಹನಿ (8) ಮತ್ತು ಯುವರಾಜ್ (10) ಎಂದು ಗುರುತಿಸಲಾಗಿದೆ. ಆಯುಷ್ ಮತ್ತು ಅಹಾನ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಯುವರಾಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಬಾಬಾ ಕಾಲೋನಿಯಲ್ಲಿರುವ ಸಂತ್ರಸ್ತರ ನಿವಾಸದ ಸಮೀಪದಲ್ಲಿ ಕ್ಷೌರಿಕ ಅಂಗಡಿ ನಡೆಸುತ್ತಿದ್ದ ಸಾಜಿದ್ ಗೆ ಮೃತರ ತಂದೆ ವಿನೋದ್ ಪರಿಚಯವಾಗಿತ್ತು. ಪೊಲೀಸ್ ವರದಿಗಳ ಪ್ರಕಾರ ಮಂಗಳವಾರ ಸಂಜೆ, ಅವರು ಮನೆಗೆ ಪ್ರವೇಶಿಸಿ ತನಗೆ ಚಹಾ ನೀಡುವಂತೆ ಕೇಳಿಕೊಂಡಿದ್ದರು. ಆಗ ವಿನೋದ್ ಅವರ ಮೂವರು ಮಕ್ಕಳಾದ ಆಯುಷ್ (13), ಅಹಾನ್ (7) ಮತ್ತು ಪಿಯೂಷ್ (6) ಆಟವಾಡುತ್ತಿದ್ದರು.
ಇದ್ದಕ್ಕಿದ್ದಂತೆ ಆರೋಪಿಯು ಇಬ್ಬರು ಹಿರಿಯ ಸಹೋದರರ ಕತ್ತು ಸೀಳಲು ಮುಂದಾಗಿದ್ದಾನೆ. ಅತ್ತ ಇದನ್ನು ನೋಡಿ ಸ್ಥಳದಿಂದ ಓಡುವ ಮೊದಲು ಆರು ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯಿಂದಾಗಿ ಆಯುಷ್ ಮತ್ತು ಅಹಾನ್ ಸಾವನ್ನಪ್ಪಿದ್ದರೆ, ಪಿಯೂಷ್ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಆರೋಪಿ ಸಾಜಿದ್ ನನ್ನು ಬಂಧಿಸಲಾಗಿದೆ. ಇದೇ ವೇಳೆ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ. ಆರೋಪಿ ಸಾಜಿದ್ ಮತ್ತು ಮೃತ ಮಕ್ಕಳ ತಂದೆಯ ನಡುವಿನ ನಿರಂತರ ಸಂಘರ್ಷವೇ ಈ ಭೀಕರ ಕೊಲೆಗಳ ಹಿಂದಿನ ಉದ್ದೇಶ ಎಂದು ಪೊಲೀಸರು ಹೇಳಿದ್ದಾರೆ.
ಈ ಭಯಾನಕ ದಾಳಿಯ ಕೆಲವೇ ಗಂಟೆಗಳ ನಂತರ ಆರೋಪಿ ಸಾಜಿದ್ ನನ್ನು ಪೊಲೀಸರು ಶೇಖುಪುರದ ಕಾಡಿನಲ್ಲಿ ಪತ್ತೆ ಹಚ್ಚಿದ್ದಾರೆ. ಆವಾಗ ಆತ ರಕ್ತಸಿಕ್ತ ಬಟ್ಟೆಗಳನ್ನು ಧರಿಸಿದ್ದ. ಆವಾಗ ಸಾಜಿದ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಆವಾಗ ಪ್ರತಿಕ್ರಿಯೆಯಾಗಿ ಪೊಲೀಸ್ರು ಗುಂಡು ಹಾರಿಸಿದ ಪರಿಣಾಮವಾಗಿ ಆರೋಪಿಯು ಸಾವನ್ನಪ್ಪಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth