ವಿಶ್ವದಲ್ಲಿಯೇ ಅತೀ ಹೆಚ್ಚು ಕಾಲದವರೆಗೆ ಪ್ರಧಾನಿಯಾಗಿದ್ದ ಬಹ್ರೈನ್ ನ ಪ್ರಧಾನಿ ನಿಧನ | ಹೊಸ ಪ್ರಧಾನಿಯ ನೇಮಕ
ಮನಮಾ, ಬಹ್ರೇನ್: ಬಹ್ರೈನ್ ನ ಪ್ರಧಾನ ಮಂತ್ರಿ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ನಿಧನರಾಗಿದ್ದು, ಈ ಸ್ಥಾನಕ್ಕೆ ಅವರ ತಮ್ಮನ ಪುತ್ರ ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಲಾಗಿದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ ನಲ್ಲಿ ಬಹ್ರೈನ್ ನ ಪ್ರಧಾನ ಮಂತ್ರಿ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅವರು ನಿಧನರಾಗಿದ್ದಾರೆ. ಬಹ್ರೇನ್ ಗೆ 1971ರಲ್ಲಿ ಸ್ವಾತಂತ್ರ್ಯ ಬಂದ ನಂತರ ಪ್ರಧಾನಿ ಹುದ್ದೆಯಲ್ಲಿದ್ದ ಷೇಕ್ ಖಲಿಫಾ ಅವರು, ವಿಶ್ವದಲ್ಲಿಯೇ ಅತೀ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿ ದಾಖಲೆ ಬರೆದಿದ್ದಾರೆ.
ಸುಮಾರು ಐದು ದಶಕಗಳ ಕಾಲ ಆಡಳಿತ ನಡೆಸಿದ್ದ ಮಂತ್ರಿ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ ಬುಧವಾರ ನಿಧನರಾಗಿದ್ದರು. ಇವರ ಸ್ಥಾನಕ್ಕೆ ರಾಜಕುಮಾರ ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ನೇಮಕ ಮಾಡಲಾಗಿದೆ.
ಗೆಜೆಟ್ ಪ್ರಕಟಗೊಂಡ ಕೂಡಲೇ ರಾಯಲ್ ಆದೇಶ ಜಾರಿಗೆ ಬರಲಿದೆ. ನಂತರ ಫ್ರಿನ್ಸ್ ಸಲ್ಮಾನ್ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.