ಸಿಎಎ ಆಂದೋಲನದಿಂದ, ರೈತರ ಆಂದೋಲನವರೆಗೂ ಅಂಬೇಡ್ಕರ್ ಅವರನ್ನು ಏಕೆ ನೋಡಲಾಗುತ್ತದೆ? - Mahanayaka

ಸಿಎಎ ಆಂದೋಲನದಿಂದ, ರೈತರ ಆಂದೋಲನವರೆಗೂ ಅಂಬೇಡ್ಕರ್ ಅವರನ್ನು ಏಕೆ ನೋಡಲಾಗುತ್ತದೆ?

09/12/2020

ಸಿಎಎ ಆಂದೋಲನವಾಗಲಿ ಅಥವಾ ಇಂದಿನ ರೈತ ಆಂದೋಲನವೆ ಇರಲಿ, ಇಲ್ಲಿ ಪ್ರಮುಖವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಪ್ಪದೇ ಬರುತ್ತಾರೆ. ವಾಸ್ತವವಾಗಿ ಯಾರೊಬ್ಬರ ಹಕ್ಕನ್ನು ಕೊಲ್ಲಲ್ಪಟ್ಟಾಗ, ಸಂವಿಧಾನವು ನಾಗರಿಕರಿಗೆ ನೀಡಿರುವ ಹಕ್ಕುಗಳ ಮೇಲೆ ದಾಳಿ ಮಾಡಿದಾಗಲೆಲ್ಲಾ ನೊಂದ ಜನರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪ್ರೇರಣೆ ಪ್ರತೀಕವಾಗಿ ನೆನಪಿಸಿಕೊಳ್ಳುತ್ತಾರೆ. 1956 ರ ಡಿಸೆಂಬರ್ 6 ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ಹೊಂದಿದ್ದರು ಅವರು ನಮ್ಮ ಇಂದಿನ ಜೀವನದಲ್ಲಿ, ನಮ್ಮ ರಾಜಕೀಯದಲ್ಲಿ, ನಮ್ಮ ಸಮಾಜದಲ್ಲಿ ನಿರಂತರವಾಗಿ ಉಪಸ್ಥಿತರಾಗಿರುತ್ತಾರೆ. ಸದ್ಯ ಅವರ ಉಪಸ್ಥಿತಿ ಹೆಚ್ಚು ಪ್ರಸ್ತುತವಾಗಿದೆ ಎಂಬುದು ತೋರುತ್ತದೆ.

ಪ್ರಸ್ತುತ ಸಮಯದಲ್ಲಿ ಹೆಚ್ಚು ಉಪಸ್ಥಿತಿ ಏಕೆಂದರೆ ಈ ದೇಶಕ್ಕೆ ಸಮಾನತೆ ಮತ್ತು ಸಹೋದರತ್ವವನ್ನು ಕಲಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆ ಸಮಾನತೆ ಮತ್ತು ಸಹೋದರತ್ವದ ಸಿದ್ಧಾಂತಕ್ಕೆ ಬಹುಶಃ ಇಂದು ಹೆಚ್ಚಿನ ದಾಳಿಗಳನ್ನು ನಡೆಯುತ್ತಿವೆ. ಧರ್ಮದ ಹೆಸರಿನಲ್ಲಿ, ಪೌರತ್ವ ನೀಡುವಲ್ಲಿ, ತಾರತಮ್ಯ ಮತ್ತು ವಿವಾದಿತ ಲವ್ ಜಿಹಾದ್ ಹೆಸರಿನಲ್ಲಿ ಅಸಂವಿಧಾನಿಕ ಕಾನೂನನ್ನು ತರುವ ವಿಷಯವಾಗಲಿ ಮತ್ತು ಕೃಷಿ ಮಸೂದೆಯನ್ನು ಬಹುಮತದ ಒತ್ತಾಯದ ಮೇರೆಗೆ ರೈತರ ಮೇಲೆ ಹೇರುವುದು ಅಥವಾ ಪ್ರತಿಭಟನೆಯನ್ನು ದೇಶದ್ರೋಹವೆಂದೇಳಿ ವಿರೋಧಿಸುವ ಮನಸ್ಥಿತಿಯನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣಬಹುದಾಗಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ರವರು ಶೋಷಿತ, ತುಳಿತಕ್ಕೊಳಗಾದ, ದಮನಿತರಿಗಾಗಿ ಹೋರಾಡಿದ ರೀತಿಯ ಇತಿಹಾಸವು ಇತಿಹಾಸದುದ್ದಕ್ಕೂ ವಿಶಿಷ್ಟವಾಗಿದೆ.  ಬಾಬಾ ಸಾಹೇಬ್ ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧದ ಆದೋಲನದೊಳಗೆ ಪ್ರೇರಣೆಯ ಸಂಕೇತವಾಗಿದ್ದಾರೆ. ನಿಶ್ಚಿತವಾಗಿ ಬಹುತ್ವ, ಭಾರತೀಯ ಸಂಪ್ರದಾಯಗಳ ಮೇಲಿನ ದಾಳಿಗಳು ಹೆಚ್ಚಾದಾಗ ಬಾಬಾಸಾಹೇಬ್ ಅವರನ್ನು ಜನರು ಬಹಳಷ್ಟು ನೆನಪಿಸಿಕೊಳ್ಳುತ್ತಾರೆ. ಹೋರಾಟಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟಗಾರಿಗೆ ಸ್ಫೂರ್ತಿ ನೀಡುತ್ತಾರೆ.

ಬಾಬಾ ಸಾಹೇಬ್ ಎಂದರೆ ವಿರೋಧಿಗಳಿಗೆ ಭಯ.

ಚಳುವಳಿ ಯಾವುದೇ ಇರಲಿ, ಅದರಲ್ಲಿ ಬಾಬಾಸಾಹೇಬ್ ರ ಹೆಸರು ಸೇರಿಸಿದರೆ, ಆಡಳಿತ ವರ್ಗ ತುಂಬಾ ಭಯಭೀತರಾಗುತ್ತಾರೆ. ದಲಿತರು ಮುಸ್ಲಿಮರೊಂದಿಗೆ ಸೇರಿದ್ದರೆ, ರೈತ ಚಳವಳಿಗೆ ದಲಿತರು ಸೇರಿದ್ದರೇ, ದಲಿತರು ಮಹಿಳೆಯರ ಹಕ್ಕುಗಳ ಹೋರಾಟದಲ್ಲಿ ಸೇರಿದ್ದರೇ ಗೇಮ್ ಓವರ್ ಎಂದೇ ಆಡಳಿತ ವರ್ಗ ಭಾವಿಸುವಷ್ಟು ಭಯ ಮನೆ ಮಾಡಿದೆ. ಆದ್ದರಿಂದ ಬಾಬಾಸಾಹೇಬ್ ರವರ ಪೋಸ್ಟರ್ ಕಾಣಿಸಿಕೊಂಡಾಗಲೆಲ್ಲಾ, ಬಾಬಾಸಾಹೇಬ್ ಅಂಬೇಡ್ಕರ್ ರವರ ಹೆಸರು ಯಾವುದೇ ಚಳವಳಿಯೊಂದಿಗೆ ಸಂಬಂಧ ಹೊಂದಿದಾಗಲೆಲ್ಲಾ ಆಡಳಿತ ವರ್ಗ ಬಹಳಷ್ಟು ಭಯಭೀತರಾಗುತ್ತಾರೆ.

ಬಾಬಾ ಸಾಹೇಬ್ ತಮ್ಮ ಇಡೀ ಜೀವನವನ್ನು ಯಾವ ಕೆಟ್ಟ ಬ್ರಾಹ್ಮಣಶಾಹಿ ಶಕ್ತಿಗಳ ವಿರುದ್ಧ ಹೋರಾಡಿದರೂ ಇಂದು ಅದೇ ಕೆಟ್ಟ ಬ್ರಾಹ್ಮಣಶಾಹಿ ಶಕ್ತಿಗಳು ಬಂಡವಾಳಶಾಹಿ ಶಕ್ತಿಗಳೊಂದಿಗೆ ಜೊತೆಗೂಡಿ ದೇಶದ ಬಹುಸಂಖ್ಯಾತರ ಜೀವನವನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರ ಮಾಡುತ್ತಿವೇ. ಇಂತಹ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೊಂದು ಜನರಿಗೆ ಶಕ್ತಿ ನೀಡುವ ಬಿಗ್ ಬ್ರಾಂಡ್ ಆಗಿ ಮುಂಚೂಣಿ ಸ್ಥಾನದಲ್ಲಿ ಎದ್ದು ಕಾಣುತ್ತಾರೆ. ಭವಿಷ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವ ಶಕ್ತಿ ಪ್ರತಿ ಹೋರಾಟದಲ್ಲಿ ತಪ್ಪದೇ  ಅಳವಡಿಸಿಕೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ಬಹಳಷ್ಟಿದೆ ಎಂದರೆ ತಪ್ಪಾಗಲಾರದು.

ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವ ಬ್ರ್ಯಾಂಡ್ ಅನ್ನು ಹೈಜಾಕ್ ಮಾಡುವ ಪ್ರಯತ್ನ ನಡೆಯುತ್ತಿರುತ್ತವೆ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಯಾರ ಕೈಗೆ ಅಷ್ಟೊಂದು ಸಲೀಸಾಗಿ ಸಿಗುವ ಸಾಧ್ಯತೆ ತೀರಾ ಕಡಿಮೆಯೇ ಎನ್ನಬಹುದು. ಅಧಿಕಾರದಲ್ಲಿ ಕುಳಿತವರು ಅವರು ಹೇಳಿದ ಮಾರ್ಗವನ್ನು ಅನುಸರಿಸುತ್ತಿವೆ, ಬಾಬಾಸಾಹೇಬನ ಕನಸನ್ನು ನನಸಾಗಿಸಲು ದೃಢ ಸಂಕಲ್ಪ ಹೊಂದಿದ್ದಾರೆಂದು ಹೇಳುತ್ತಿದ್ದಾರೆ, ಆದರೆ ಅವರೇ ಇಂದು ಬಾಬಾಸಾಹೇಬ್ ರವರ ಸಿದ್ಧಾಂತಗಳಿಗೆ ಹೆಚ್ಚು ಪೆಟ್ಟು ನೀಡುತ್ತಿದ್ದಾರೆ.  ಬಾಬಾರ ಮಾರ್ಗವನ್ನು ಅನುಸರಿಸುತ್ತಿವೆ ಎನ್ನುವ  ಕಪಟಿ ನಾಟಕವಾಡುವ ಇಂತಹವರಿಗೆ ಸ್ವಯಂ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಅಗತ್ಯವಿರುವ ಸಂಪೂರ್ಣ ವ್ಯವಸ್ಥೆ ಮಾಡಿದ್ದರು. ಅದಕ್ಕೆ ಉದಾಹರಣೆಯೇ ಕಪಟಿ ನಾಟಕವಾಡುವರ ವಿರುದ್ಧ ಇಂದು ನಡೆಯುತ್ತಿರುವ ಹೋರಾಟಗಳೇ ಸಾಕ್ಷಿ. ಜನರ ಹಕ್ಕುಗಳು ಕೊಲ್ಲಲ್ಪಟ್ಟಾಗಲೆಲ್ಲಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೂರ್ಯ ಚಂದ್ರ ಇರುವರೆಗೂ ಸ್ಮರಿಸಲಾಗುವುದು.

-ಬಾಲಾಜಿ ಎಂ. ಕಾಂಬಳೆ

ಇತ್ತೀಚಿನ ಸುದ್ದಿ