ಬಸವಣ್ಣ ಅಸಮಾನತೆಯ ವಿರುದ್ಧ ಧ್ವನಿ‌ ಎತ್ತಿದವರು | ತಿಪ್ಪೇಸ್ವಾಮಿ ಎಂ.ಕೆ. - Mahanayaka
9:30 PM Thursday 7 - November 2024

ಬಸವಣ್ಣ ಅಸಮಾನತೆಯ ವಿರುದ್ಧ ಧ್ವನಿ‌ ಎತ್ತಿದವರು | ತಿಪ್ಪೇಸ್ವಾಮಿ ಎಂ.ಕೆ.

basavanna
15/05/2021

ಮುದ್ದೇನೇರಳೇಕೆರೆ: ಎನ್ ಗಂಗಪ್ಪ ಎಜುಕೇಶನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮುದ್ದೇನೇರಳೇಕೆರೆ ಗ್ರಾಮದಲ್ಲಿ ಸೊಸೈಟಿ ವತಿಯಿಂದ ಜಗಜ್ಜ್ಯೋತಿ ಬಸವ ಜಯಂತಿಯನ್ನ ಸರಳವಾಗಿ ಆಚರಿಸಲಾಯಿತು.

ಕಾರ್ಯದರ್ಶಿ ತಿಪ್ಪೇಸ್ವಾಮಿ ಎಂ.ಕೆ. ಮಾತನಾಡಿ,  ಜಗತ್ತು ಕಂಡ ಅತಿ ಶ್ರೇಷ್ಟ ಮಹಾನ್ ಮಾನವತವಾದಿ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಹುಟ್ಟಿದಂತಹ ವಜ್ರದ ಗುಣದವರು ತಮ್ಮ ವಚನಗಳ ಮುಖಾಂತರ ಕತ್ತಲ್ಲಲ್ಲಿದ್ದಂತಹ ಸಮಾಜವನ್ನು ಬೆಳಕಿನ ದಾರಿಗೆ ತರುವಲ್ಲಿ ಪ್ರಬಲ ಪಾತ್ರವಹಿಸಿದ್ದಾರೆ .ಕಾಯಕವೇ ಕೈಲಾಸವೆಂದು ಕಾಯಕದ ಮಹತ್ವದ ಬಗ್ಗೆ ಜಗತ್ತಿಗೆ ಪರಿಚಯಿಸಿದರು. ಅಂತರ್ಜಾತಿಯ ವಿವಾಹಗಳ ಮೂಲಕ ಸಮಸಮಾಜವನ್ನು ನಿರ್ಮಿಸುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡವರು ಎಂದು ಅವರು ತಿಳಿಸಿದರು.

ಬಸವಣ್ಣನವರು ಚಿಕ್ಕ ವಯಸ್ಸಿನಲ್ಲೇ ತಮ್ಮ ಅಕ್ಕನಾದ ನಾಗಮ್ಮನಿಗೆ ಉಪನಯನ ಮಾಡಲಿಲ್ಲವೆಂದರೆ ನನಗೂ ಕೂಡ ಉಪನಯನ ಅಗತ್ಯವಿಲ್ಲ ಎಂದು ಮಹಿಳಾ ಅಸಮಾನತೆಯ ವಿರುದ್ಧ ಧ್ವನಿ‌ ಎತ್ತಿದಂತಹ ಧೀಮಂತ ಶಕ್ತಿ, ಭಕ್ತಿ ಭಂಡಾರಿ ಬಸವಣ್ಣನವರು  ನಾವೆಲ್ಲರೂ ಬಸವ ದಾರಿಯಲ್ಲಿ ನಡೆಯೋಣ ಎಂದು ತಿಪ್ಪೇಸ್ವಾಮಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಸೊಸೈಟಿ ಸ್ಥಾಪಕ ಮೋಹನ್ ಕುಮಾರ್ ಎಂ.ಎಲ್, ಖಜಾಂಚಿ‌ ಶಾಂತಕುಮಾರ್ ಸದಸ್ಯರಾದ ಆನಂದಪ್ಪ, ಗಿರೀಶ್ , ಮಾರುತಿ ಮತ್ತು ಊರಿನ ಯುವಕರು ಹಾಜರಿದ್ದರು. ಸಾಮಾಜಿಕ‌‌ ಅಂತರ ಕಾಯ್ದುಕೊಂಡು ಸರಳವಾಗಿ‌ ಬಸವ ಜಯಂತಿಯನ್ನು ಆಚರಿಸಲಾಯಿತು.

ಇತ್ತೀಚಿನ ಸುದ್ದಿ