ಬಾತ್ ರೂಮ್ ನಲ್ಲಿ ಪತ್ತೆಯಾಯ್ತು 60 ಹಾವುಗಳು! - Mahanayaka
10:25 AM Monday 15 - December 2025

ಬಾತ್ ರೂಮ್ ನಲ್ಲಿ ಪತ್ತೆಯಾಯ್ತು 60 ಹಾವುಗಳು!

sneak
21/05/2022

ಮುಜಾಫರ್‌ ನಗರ : ಉತ್ತರ ಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಮನೆಯೊಂದರ  ಸ್ನಾನಗೃಹದಲ್ಲಿ ಸುಮಾರು 60 ಹಾವುಗಳು ಮತ್ತು 75 ಮೊಟ್ಟೆಗಳು ಪತ್ತೆಯಾಗಿವೆ.

ರಂಜಿತ್ ಸಿಂಗ್ ಎಂಬವರ ಮನೆಯಲ್ಲಿ  ಹಾವು ಮತ್ತು ಮೊಟ್ಟೆಗಳು ಪತ್ತೆಯಾಗಿವೆ. ರಂಜಿತ್ ಸಿಂಗ್ ಈ ಮನೆಯನ್ನು ಬಹಳಷ್ಟು ಕಾಲದಿಂದ ಮನೆಯನ್ನು ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ.

ಮನೆ ಪರಿಶೀಲನೆಯ ವೇಳೆ ಬಾತ್ ರೂಮ್ ನಲ್ಲಿ ಹಾವು ಪತ್ತೆಯಾಗಿತ್ತು. ಹಾವು ಹಿಡಿಯುವವರನ್ನು ಕರೆದಿದ್ದು, ಹಾವು ಹಿಡಿಯುವವರು ಬಂದ ವೇಳೆ ಬಾತ್ ರೂಮ್ ನಲ್ಲಿ 60 ಹಾವುಗಳು ಮತ್ತು 75ರಷ್ಟು ಹಾವಿನ ಮೊಟ್ಟೆಗಳು ಪತ್ತೆಯಾಗಿವೆ.

ಸಾಕಷ್ಟು ಸಮಯಗಳ ಕಾಲ ನಿರಂತರವಾಗಿ  ಪ್ರಯತ್ನಿಸಿದ ಬಳಿಕ ಹಾವುಗಳನ್ನು ಹಿಡಿದು ಕಾಡಿಗೆ ಬಿಡಲಾಗಿದೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಿರಲಿಲ್ಲ, ಮನೆ ಕಸದಿಂದ ತುಂಬಿದ್ದರಿಂದಾಗಿ ಇಷ್ಟೊಂದು ಹಾವುಗಳು ವಾಸವಾಗಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಠ್ಯ ಪುಸ್ತಕದಿಂದ ನಾರಾಯಣ ಗುರು ಹೊರಗೆ: “ಬಿಲ್ಲವ ಸಚಿವರು ರಾಜೀನಾಮೆ ನೀಡಲಿ”

ಹುಡುಗಿ ನೋಡಿ ಬರುತ್ತೇನೆ ಎಂದು ಹೊರಟಿದ್ದ ಯುವಕ ನೀರುಪಾಲು!

ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ ಅಪಘಾತ: ಇಬ್ಬರು ಸಾವು, ಓರ್ವ ಗಂಭೀರ

ಮುಂದಕ್ಕೆ ಚಲಿಸಿ ಎಂದ ಗೂಗಲ್ ಮ್ಯಾಪ್: ಹೊಳೆಗೆ ಕಾರು ಇಳಿಸಿದ ಚಾಲಕ

ಇತ್ತೀಚಿನ ಸುದ್ದಿ