ಮುಂದಕ್ಕೆ ಚಲಿಸಿ ಎಂದ ಗೂಗಲ್ ಮ್ಯಾಪ್: ಹೊಳೆಗೆ ಕಾರು ಇಳಿಸಿದ ಚಾಲಕ - Mahanayaka

ಮುಂದಕ್ಕೆ ಚಲಿಸಿ ಎಂದ ಗೂಗಲ್ ಮ್ಯಾಪ್: ಹೊಳೆಗೆ ಕಾರು ಇಳಿಸಿದ ಚಾಲಕ

google map
19/05/2022

ನಗರ ಪ್ರದೇಶಗಳಲ್ಲಿ ಬಹು ಉಪಯೋಗಿಯಾಗಿರುವ ಗೂಗಲ್ ಮ್ಯಾಪ್ ಹಳ್ಳಿಗಳಲ್ಲಿ ದಾರಿ ತೋರಿಸುವುದಕ್ಕಿಂತಲೂ ದಾರಿ ತಪ್ಪಿಸುವುದೇ ಹೆಚ್ಚು ಎಂದು ಸಾಮಾನ್ಯವಾಗಿ ಬಳಕೆದಾರರು ಹೇಳುತ್ತಿರುತ್ತಾರೆ. ಅಂತಹ ಘಟನೆಯೊಂದು ಕೇರಳದಲ್ಲಿ ನಡೆಸಿದ್ದು, ಕರ್ನಾಟಕದಿಂದ ಕೇರಳಕ್ಕೆ ತೆರಳಿದ್ದ ಪ್ರವಾಸಿಗರು ಗೂಗಲ್ ಮ್ಯಾಪ್ ನಿಂದಾಗಿ ಭಾರೀ ಅಪಾಯಕ್ಕೀಡಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ.

ಕರ್ನಾಟಕ ಮೂಲದ ಕುಟುಂಬ ಕೇರಳದಲ್ಲಿ ಪ್ರವಾಸದಲ್ಲಿದ್ದು,  ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಕಾರು ಚಲಾಯಿಸಿದ್ದಾನೆ. ಈ ಪ್ರವಾಸಿಗರು ಮುನ್ನಾರ್‌ನಿಂದ ಅಲಪ್ಪುಳಕ್ಕೆ ತೆರಳುತ್ತಿದ್ದು,  ಕೊಟ್ಟಾಯಂನ ಕುರುಪ್ಪಂತರ ಕಡವು ಎಂಬ ಪ್ರದೇಶದ ವರೆಗೆ ಗೂಗಲ್ ನ ಸೂಚನೆಗಳನ್ನು ಕೇಳಿ ಕೊಂಡು ತೆರಳಿದ್ದಾರೆ.

ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಹೊಸ ಪ್ರದೇಶದಲ್ಲಿ ಸಂಭವಿಸಬಹುದಾದ ಅಪಾಯವನ್ನು ಕೇಳದೇ ಗೂಗಲ್ ಧ್ವನಿಯನ್ನೇ ಕೇಳಿಕೊಂಡು ಮುನ್ನುಗ್ಗಿದ್ದು, ಹೊಳೆಯೊಂದಕ್ಕೆ ನೇರವಾಗಿ ಕಾರು ಇಳಿದಿದ್ದು, ಕಾರು ನೀರಿನಲ್ಲಿ ಕೊಚ್ಚಿ ಹೋಗಲು ಆರಂಭಿಸಿತ್ತು. ಈ ವೇಳೆ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿದ್ದು, ಕುಟುಂಬಸ್ಥರನ್ನು ಕಾರಿನಿಂದ ಕೆಳಗಿಳಿಸಿ ರಕ್ಷಿಸಿದ್ದಾರೆ. ಬಳಿಕ ಎಲ್ಲರೂ ಸೇರಿ ಕಾರನ್ನು ದಡಕ್ಕೆ ಎಳೆಯಲು ಸಾಕಷ್ಟು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನಗಳಾಗಿಲ್ಲ. ಹೀಗಾಗಿ ಲಾರಿಯೊಂದನ್ನು ತಂದು ಕಾರನ್ನು ದಡಕ್ಕೆ ಎಳೆಯಲಾಯಿತು.

ಇಲ್ಲಿನ ಕುರುಪ್ಪಂತರ ಕ್ರಾಸಿಂಗ್ ತಲುಪುತ್ತಿದ್ದಂತೆಯೇ ಹೊಳೆಯೊಂದು ಎದುರಾಗಿದ್ದು, ಈ ವೇಳೆ ಗೂಗಲ್ ಮ್ಯಾಪ್ ನೇರವಾಗಿ ಮುಂದೆ ಹೋಗಿ ಎಂದು ಹೇಳಿದೆ. ಗೂಗಲ್ ಮ್ಯಾಪ್ ನ ಆದೇಶವನ್ನು ಕೇಳಿಕೊಂಡು ಬಂದಿದ್ದ ಡ್ರೈವರ್ ನೇರವಾಗಿ ಹೊಳೆಗೆ ಕಾರು ಇಳಿಸಿದ್ದಾನೆನ್ನಲಾಗಿದೆ. ಈ ವೇಳೆ ಸ್ಥಳೀಯರು ಬೊಬ್ಬೆ ಹೊಡೆದು ಎಚ್ಚರಿಸಿದ್ದರು. ಅಷ್ಟೊತ್ತಿಗಾಗಲೇ ಕಾರು ನೀರಿಗೆ ಇಳಿದಿತ್ತು.

ಈ ರಸ್ತೆಯಲ್ಲಿ ಹಲವರಿಗೆ ಇಂತಹ ಅನುಭವವಾಗಿದೆಯಂತೆ. ಆಗಾಗ ಅಪಾಯಗಳು ಸಂಭವಿಸುತ್ತಿರುವುದರಿಂದಾಗಿ ಈ ರಸ್ತೆಯನ್ನು ಪಂಚಾಯತ್ ನೇತೃತ್ವದಲ್ಲಿ ಸರಪಳಿಯಿಂದ ಮುಚ್ಚಲಾಗಿತ್ತು ಎನ್ನಲಾಗಿದೆ.  ಘಟನೆಯ ಬಳಿಕ ಪ್ರವಾಸಿ ಕುಟುಂಬ ಅದೇ ಕಾರಿನಲ್ಲಿ ಬೇರೆ ಮಾರ್ಗವಾಗಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿಶ್ವಕ್ಕೆ ಆತಂಕ ಸೃಷ್ಟಿಸಿದ ಮಂಕಿ ಪಾಕ್ಸ್: ಮೂರು ದೇಶಗಳಲ್ಲಿ ರೋಗ ಪತ್ತೆ | ಇದರ ಲಕ್ಷಣಗಳೇನು?

ಸೋಲಿಲ್ಲದ ಸರದಾರ ಬಾಕ್ಸರ್ ಮೂಸಾ ಅಸ್ಕಾನ್ ರಿಂಗ್ ನಲ್ಲೇ ಹೃದಯಾಘಾತದಿಂದ ನಿಧನ

ಎಸೆಸೆಲ್ಸಿ ಫಲಿತಾಂಶ: ದಲಿತ ಕಾರ್ಮಿಕನ ಪುತ್ರ ರಾಜ್ಯಕ್ಕೆ ಟಾಪರ್ | ಅಮಿತ್ ನ ಸಾಧನೆಯ ಹಿಂದಿದ್ದ ಕಷ್ಟಗಳೇನು?

ಶಾಲೆಗೆ ಗೋಮಾಂಸದ ಪದಾರ್ಥ ತಂದಿದ್ದಕ್ಕೆ ಮುಖ್ಯೋಪಾಧ್ಯಾಯಿನಿ ಅರೆಸ್ಟ್!

ಇತ್ತೀಚಿನ ಸುದ್ದಿ