ಸೋಲಿಲ್ಲದ ಸರದಾರ ಬಾಕ್ಸರ್ ಮೂಸಾ ಅಸ್ಕಾನ್ ರಿಂಗ್ ನಲ್ಲೇ ಹೃದಯಾಘಾತದಿಂದ ನಿಧನ - Mahanayaka

ಸೋಲಿಲ್ಲದ ಸರದಾರ ಬಾಕ್ಸರ್ ಮೂಸಾ ಅಸ್ಕಾನ್ ರಿಂಗ್ ನಲ್ಲೇ ಹೃದಯಾಘಾತದಿಂದ ನಿಧನ

musa yamak
19/05/2022

ಬಾಕ್ಸಿಂಗ್ ನಲ್ಲಿ  ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದ ಟರ್ಕಿ-ಜರ್ಮನ್ ಮೂಲದ  ಮೂಸಾ ಅಸ್ಕನ್ ಯಮಕ್(Musa Yamak) ರಿಂಗ್ ನಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಜರ್ಮನಿಯ ಮ್ಯೂನಿಕ್ ನಗರದಲ್ಲಿ ಉಗಾಂಡಾದ ಪ್ರತಿಸ್ಪರ್ಧಿ ಹಂಜಾ ವಂಡೆರಾ(Hamza Wandera) ಅವರೊಂದಿಗೆ ಸೆಣಸಾಡುತ್ತಿದ್ದ ಮೂಸಾ ಅಸ್ಕನ್ ಯಮಕ್ ಎರಡು ಸುತ್ತುಗಳ ಆಟವನ್ನು ಪೂರ್ಣಗೊಳಿಸಿದ್ದರು. ಎರಡನೇ ಸುತ್ತಿನಲ್ಲಿ ತೀವ್ರವಾದ ಏಟುಗಳ ಬಿದ್ದಿದ್ದರಿಂದಾಗಿ ಯಮಕ್ ತೀವ್ರವಾಗಿ ಬಳಲಿದ್ದರು.

ಮೂರನೇ ಸುತ್ತಿಗೆ ಸಿದ್ಧರಾಗಿದ್ದ ಅವರು, ಎದುರಾಳಿಯನ್ನು ಇನ್ನೇನು ಎದುರಿಸಬೇಕು ಅನ್ನುವಷ್ಟರಲ್ಲಿ  ಏಕಾಏಕಿ ಸ್ತಬ್ಧರಾಗಿದ್ದು, ನೆಲದ ಮೇಲೆ ಮಂಡಿಯೂರಿ ಕುಳಿತ ಅವರು ಏಕಾಏಕಿ ಕುಸಿದು ಬಿದ್ದರು. ಈ ವೇಳೆ, ಅವರ ಅಭಿಮಾನಿಗಳು ಆತಂಕದಿಂದ ಕೂಗಿದ್ದು, ಏನಾಯಿತು ಎಂದು ಎಲ್ಲರೂ ಗಾಬರಿಗೊಳಗಾಗಿದ್ದಾರೆ.

ತಕ್ಷಣವೇ ಅವರಿಗೆ ಸ್ಥಳದಲ್ಲಿದ್ದ ತಜ್ಞರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದಿದ್ದಾಗ, ಆಸ್ಪತ್ರೆಗೆ ಸಾಗಿಸಿದ್ದು, ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರು ಎಳೆದಿದ್ದರು.

ಏಕಾಏಕಿ ಹೃದಯ ನಿಂತು ಹೋಗಿರುವುದೇ ಮೂಸಾ ಅಸ್ಕನ್ ಯಮಕ್  ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಆಟದಲ್ಲಿ ನಿರತರಾಗಿದ್ದ ವೇಳೆಯೇ ಕಾರ್ಡಿಯಾಕ್ ಅರೆಸ್ಟ್ ಅಥವಾ ಸಡನ್ ಡೆತ್ ಆಗಿದೆ ಎಂದು ತಿಳಿಸಿದ್ದಾರೆ.

2017 ರಿಂದ ವೃತ್ತಿಪರ ಬಾಕ್ಸರ್ ಅಗಿ ಗುರುತಿಸಿಕೊಂಡಿದ್ದ 38-ವರ್ಷ ವಯಸ್ಸಿನ ಮೂಸಾ ಇದುವೆರೆಗೆ ಯಾರ ಎದುರೂ ಸೋತಿರಲಿಲ್ಲ. ಇದೀಗ ತಮ್ಮ ಕೊನೆಯ ಆಟದಲ್ಲೂ ಸೋಲು ಗೆಲುವು ನಿರ್ಣಯವಾಗುವ ಮೊದಲು ಅವರು ಇಹಲೋಕ ತ್ಯಜಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಸೆಸೆಲ್ಸಿ ಫಲಿತಾಂಶ: ದಲಿತ ಕಾರ್ಮಿಕನ ಪುತ್ರ ರಾಜ್ಯಕ್ಕೆ ಟಾಪರ್ | ಅಮಿತ್ ನ ಸಾಧನೆಯ ಹಿಂದಿದ್ದ ಕಷ್ಟಗಳೇನು?

ಶಾಲೆಗೆ ಗೋಮಾಂಸದ ಪದಾರ್ಥ ತಂದಿದ್ದಕ್ಕೆ ಮುಖ್ಯೋಪಾಧ್ಯಾಯಿನಿ ಅರೆಸ್ಟ್!

ಗಾಂಧಿ ಕಥನದ ಲೇಖಕ ಡಿ.ಎಸ್.ನಾಗಭೂಷಣ ಇನ್ನಿಲ್ಲ

 ಕೊಚ್ಚಿ ಮೆಟ್ರೋ ಇನ್ನು ಮುಂದೆ ಮದುವೆ ಫೋಟೋಶೂಟ್‌ ಗೆ ಲಭ್ಯ!

ಪೈಪ್ ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಬಿದ್ದು ಇಬ್ಬರು ಕಾರ್ಮಿಕರ ಸಾವು

ಇತ್ತೀಚಿನ ಸುದ್ದಿ