ಬಿಯರ್ ಪ್ರಿಯರಿಗೆ ಶಾಕ್: ಬಜೆಟ್ ಗೂ ಮೊದಲೇ ಬಿಯರ್ ದರ ಏರಿಕೆ! - Mahanayaka

ಬಿಯರ್ ಪ್ರಿಯರಿಗೆ ಶಾಕ್: ಬಜೆಟ್ ಗೂ ಮೊದಲೇ ಬಿಯರ್ ದರ ಏರಿಕೆ!

beer
09/01/2025

ಬೆಂಗಳೂರು: ಬಿಯರ್ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ ಎದುರಾಗಿದೆ. ಬಜೆಟ್ ಗಿಂತ ಮೊದಲೇ ಮದ್ಯದ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಬಜೆಟ್ ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್ ಗೂ ಮೊದಲೇ ಮದ್ಯದ ದರ ಏರಿಕೆಯಾಗಲಿದೆ ಎನ್ನಲಾಗಿದೆ.


ADS

ಜನವರಿ 20ರಿಂದಲೇ ಕೆಲವು ಬಿಯರ್ ಗಳ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಕನಿಷ್ಠ 10ರಿಂದ 45 ರೂಪಾಯಿಗಳ ವರೆಗೆ ಬಿಯರ್ ಬೆಲೆ ಏರಿಕೆಯಾಗಲಿದೆ ಎಂದು ತಿಳಿದು ತಿಳಿದು ಬಂದಿದೆ.

300 ರೂಪಾಯಿಯೊಳಗೆ ಇರುವ ಮದ್ಯದ ಬೆಲೆ ಏರಿಕೆಗೆ ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಯಾವ ಬ್ರ್ಯಾಂಡ್ ಗೆ ಎಷ್ಟು ದರ ಏರಿಕೆ ಸಾಧ್ಯತೆ?:

ಲೆಜೆಂಡ್—100(ಈಗ ಇರುವ ದರ): 145(ಹೆಚ್ಚಾಗಲಿರುವ ದರ)

ಪವರ್ ಕೂಲ್—130 (ಈಗ ಇರುವ ದರ): 155 (ಹೆಚ್ಚಾಗಲಿರುವ ದರ)

ಬ್ಲ್ಯಾಕ್ ಪೋರ್ಟ್– 145(ಈಗ ಇರುವ ದರ): 160(ಹೆಚ್ಚಾಗಲಿರುವ ದರ)

ಹಂಟರ್– 180 (ಈಗ ಇರುವ ದರ): 190 (ಹೆಚ್ಚಾಗಲಿರುವ ದರ)

ವುಡ್ ಪೆಕರ್ ಕ್ರೆಸ್ಟ್—240 (ಈಗ ಇರುವ ದರ): 250 (ಹೆಚ್ಚಾಗಲಿರುವ ದರ)

ಪುಡ್ ಪೆಕರ್ ಗ್ಲೈಡ್ 230 (ಈಗ ಇರುವ ದರ): 240(ಹೆಚ್ಚಾಗಲಿರುವ ದರ)


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ