ಬೀಟಮ್ಮ ಗ್ಯಾಂಗ್ ಆನೆಗಳ ಹಾವಳಿ: ಗ್ರಾಮಕ್ಕೆ ಎಂಟ್ರಿ ಕೊಟ್ಟ ಸುಮಾರು 24 ಆನೆಗಳು

03/02/2024
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೀಟಮ್ಮ ಗ್ಯಾಂಗ್ ಆನೆಗಳ ಹಾವಳಿ ಹೆಚ್ಚಾಗಿದ್ದು, ತೋರಣಮಾವು ಗ್ರಾಮಕ್ಕೆ ಆನೆಗಳ ಗ್ಯಾಂಗ್ ಎಂಟ್ರಿಯಾಗಿದ್ದು, ಅರಣ್ಯ ಇಲಾಖೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಮೈಕ್ ನಲ್ಲಿ ಅನೌನ್ಸ್ ಮೆಂಟ್ ಮಾಡಲಾಗಿದೆ.
ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆ ನೀಡಿದೆ. ಅನವಶ್ಯಕವಾಗಿ ರಸ್ತೆ ಗಿಳಿಯಬೇಡಿ, ಬೆಳಗ್ಗೆ ಬೇಗನೆ ಕಾರ್ಮಿಕರು ಕಾಫಿ ತೋಟಕ್ಕೆ ಹೋಗಬೇಡಿ, ಯಾವುದೇ ಸಮಯದಲ್ಲಿ ಕಾಫಿ ತೋಟಕ್ಕೆ ಆನೆಗಳು ನುಗ್ಗುವ ಸಾಧ್ಯತೆ ಇವೆ ಎಂದು ಹಳ್ಳಿಗಳನ್ನು ಸುತ್ತಿ ಅರಣ್ಯಾಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ.
ಐದಾರು ಗ್ರಾಮಗಳ ವ್ಯಾಪ್ತಿಯಲ್ಲಿ 24 ಆನೆಗಳ ಸಂಚಾರಿಸುತ್ತಿವೆ. ತೋರಣ ಮಾವು, ಕೋಡುವಳ್ಳಿ, ಗೌತಮೇಶ್ವರ, ಅಣೂರು, ದಿಣ್ಣೆಕೆರೆ ಗ್ರಾಮಗಳಲ್ಲಿ ಕಾಡಾನೆಗಳ ಆತಂಕ ಎದುರಾಗಿದೆ. ಇವೆಲ್ಲವೂ ಚಿಕ್ಕಮಗಳೂರು ತಾಲೂಕಿನ ಗ್ರಾಮೀಣ ಭಾಗದ ಹಳ್ಳಿಗಳಾಗಿವೆ.