ಹರಿತವಾದ ಆಯುಧದಿಂದ ಪತ್ನಿಯ ತಲೆಯನ್ನೇ ಕತ್ತರಿಸಿದ: ರುಂಡ ಹಿಡಿದು ಊರಿಡೀ ತಿರುಗಾಡಿದ ಪತಿ..! - Mahanayaka

ಹರಿತವಾದ ಆಯುಧದಿಂದ ಪತ್ನಿಯ ತಲೆಯನ್ನೇ ಕತ್ತರಿಸಿದ: ರುಂಡ ಹಿಡಿದು ಊರಿಡೀ ತಿರುಗಾಡಿದ ಪತಿ..!

15/02/2024


Provided by

ವ್ಯಕ್ತಿಯೊಬ್ಬ ತನ್ನ ಪತ್ನಿಯ ರುಂಡವನ್ನೇ ಕತ್ತರಿಸಿ ಅದನ್ನು ಹಿಡಿದುಕೊಂಡು ಊರಿಡೀ ತಿರುಗಾಡಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ.

ಆರೋಪಿಯನ್ನು ಗೌತಮ್ ಗುಚ್ಚೈತ್ (40) ಎಂದು ಗುರುತಿಸಲಾಗಿದೆ. ಚಿಸ್ತಿಪುರ ಬಸ್ ನಿಲ್ದಾಣದ ಬಳಿ ಸ್ಥಳೀಯರು ಆತನನ್ನು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ನಿಯ ಕತ್ತರಿಸಿದ ರುಂಡದೊಂದಿಗೆ ಗಮನಿಸಿದ್ದಾರೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ಧಾರೆ.

ಆರೋಪಿ ಗುಚ್ಚೈತ್ ಮಾನಸಿಕ ಅಸ್ವಸ್ಥನಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಕೊಂದು ಹರಿತವಾದ ಆಯುಧದಿಂದ ಆಕೆಯ ತಲೆಯನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಂಧನದ ಬಳಿಕ ಪೊಲೀಸರು ಆತನ ಮನೆಗೆ ತೆರಳಿ ಮೃತ ಪತ್ನಿಯ ಮುಂಡವನ್ನು ಸಂಗ್ರಹಿಸಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ‌.

ಇತ್ತೀಚಿನ ಸುದ್ದಿ