ಬೆಂಗಳೂರು: ಆಗಸ್ಟ್ 14ರಂದು ಯುವಾಧಿವೇಶನ—2025

ಬೆಂಗಳೂರು: ಸಹಯಾನ ಸಂವಾದದ ಆಯೋಜನೆಯೊಂದಿಗೆ ಯುವಾಧಿವೇಶನ—2025 ಕಾರ್ಯಕ್ರಮವು ಆಗಸ್ಟ್ 14ರಂದು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ.
ಒಟ್ಟು ಎರಡು ಅಧಿವೇಶನಗಳು ನಡೆಯಲಿದೆ. ಅಧಿವೇಶನ 1ರಲ್ಲಿ ಯುವಜನರ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಸವಾಲುಗಳ ಬಗ್ಗೆ ಸಂವಾದ ನಡೆಯಲಿದೆ. ಇದರಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು ಇದರ ಪ್ರಾಧ್ಯಾಪಕರಾದ ಸಮಾಜಶಾಸ್ತ್ರ ವಿಭಾಗದ ಡಾ.ಸಿ.ಜಿ. ಲಕ್ಷ್ಮೀಪತಿ, ಸಾಮಾಜಿಕ ಕಾರ್ಯಕರ್ತೆ, ಸಾಹಿತಿ, ಕಲಾವಿದೆ ಡಾ.ದು..ಸರಸ್ವತಿ, ಸಹಯಾನ ಸಂವಾದದ ಕೋ ಪ್ರೋಗ್ರಾಂನ ಇಳಂಗೋ ಸ್ಟಾನಿಸ್ಲಾಸ್, ಸಹಯಾನ ಸಂವಾದದ ಪ್ರೋಗ್ರಾಂ ಅಸೋಸಿಯೇಟ್ ಮಿನಿಮೋಳ್ ಭಾಗವಹಿಸಲಿದ್ದಾರೆ.
ಅಧಿವೇಶನ 2ರಲ್ಲಿ ಯುವಜನರ ಹಕ್ಕುಗಳ ಸಾಕಾರ ಮತ್ತು ಯುವಜನ ಆಯೋಗ ಸ್ಥಾಪನೆ ವಿಚಾರದಲ್ಲಿ ಸಂವಾದ ನಡೆಯಲಿದೆ. ಇದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಐಎಎಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಆರ್. ಐಪಿಎಸ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ, ವಕೀಲರಾದ ಮೃದುಲಾ, ಸಹಯಾನ ಸಂವಾದ ಪ್ರೋಗ್ರಾಂ ಅಸೋಸಿಯೇಟ್ ಸಬೀನಾ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD