ಬೆಂಕಿ ಅವಘಡ : ಪತಿ ಸಾವು, ಪತ್ನಿ ಗಂಭೀರ - Mahanayaka
4:51 AM Tuesday 8 - September 2026

ಬೆಂಕಿ ಅವಘಡ : ಪತಿ ಸಾವು, ಪತ್ನಿ ಗಂಭೀರ

fire
03/03/2022

ಮೈಸೂರು: ನೀರು ಕಾಯಿಸಲು ಒಲೆ ಹಚ್ಚುವ ವೇಳೆ ಬೆಂಕಿ ತಗುಲಿ ಪತಿ ಸಾವನ್ನಪ್ಪಿದ್ದು, ರಕ್ಷಿಸಲು ಹೋದ ಪತ್ನಿಯೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ನಂದಿನಿ ಬಡಾವಣೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಶಿವಣ್ಣ ಎಂದು ಗುರುತಿಸಲಾಗಿದೆ.

ನಾಗಮ್ಮ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯಾಗಿದ್ದಾರೆ. ನೀರು ಕಾಯಿಸಲು ಒಲೆ ಹಚ್ಚುವಾಗ ಶಿವಣ್ಣಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ವೇಳೆ ಪತಿಯನ್ನ ಬಚಾವ್ ಮಾಡಲು ಹೋದ ನಾಗಮ್ಮಗೂ ಬೆಂಕಿ ಆವರಿಸಿದೆ.

ಬೆಂಕಿಗೆ ಸಿಲುಕಿ ಗಾಯಗೊಂಡ ದಂಪತಿಯನ್ನು ಕೂಡಲೇ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವಣ್ಣ ಸಾವನ್ನಪ್ಪಿದ್ದಾರೆ. ನಾಗಮ್ಮ ಅವರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ: ಕೇಂದ್ರದ ವಿರುದ್ಧ ಉಕ್ರೇನ್‌ ನಿಂದ ಮರಳಿದ ವಿದ್ಯಾರ್ಥಿಗಳು ಆಕ್ರೋಶ

ನಾಲ್ಕು ಮಂತ್ರಿಗಳು ಯಾರ ಹತ್ತಿರ ಮಾತಾಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ನವೀನ್ ಸಾವು: ಬಿಜೆಪಿ ನಾಯಕರಿಂದ ಅರ್ಥವಿಲ್ಲದ ಹೇಳಿಕೆ; ತಮಿಳುನಾಡು ಸಿಎಂ ಸ್ಟಾಲಿನ್ ವಾಗ್ದಾಳಿ

ಡಿವೈಡರ್‌ ಗೆ ಕಾರು ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

ಪ್ರೀತಿಸಿ ಮದುವೆಯಾದ ಯುವಕ ಆತ್ಮಹತ್ಯೆ: ಸತ್ತು ಮೂರು ದಿನವದರೂ ಕುಟುಂಬಸ್ಥರಿಗೆ ತಿಳಿಸದ ಪತ್ನಿ

 

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti