ಬೆಸ್ಕಾಂ ನೇಮಕಾತಿ : ಒಟ್ಟು 510 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ! - Mahanayaka
1:04 AM Wednesday 17 - September 2025

ಬೆಸ್ಕಾಂ ನೇಮಕಾತಿ : ಒಟ್ಟು 510 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ!

bescom recruitment
03/02/2025

BESCOM Recruitment 2025 — ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗವಕಾಶವಿದೆ. ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ 1 ವರ್ಷದ ಉದ್ಯೋಗ ತರಬೇತಿ ನೀಡಲಾಗುತ್ತದೆ. ಅದೇ ರೀತಿ ಇದರ ಜೊತೆಗೆ ಮಾಸಿಕ ವೇತನವನ್ನು ಕೂಡ ನೀಡಲಾಗುವುದು.


Provided by

ಈ ನೇಮಕಾತಿಯಲ್ಲಿ ಒಟ್ಟು 510 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಹುದ್ದೆಗಳನ್ನು ವಿಂಗಡಣೆ ಮಾಡಲಾಗಿದ್ದು, ಅದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

* ಎಲೆಕ್ಟ್ರಿಕಲ್ ವಿಭಾಗ — 130 ಹುದ್ದೆಗಳು

* ಇತರೆ ಇಂಜಿನಿಯರಿಂಗ್ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಹಾಗೂ ಇನ್ನಿತರೇ ವಿಷಯಗಳಲ್ಲಿ ಪದವಿ ಮುಗಿಸಿದವರಿಗೆ —  305 ಹುದ್ದೆಗಳು

* ಡಿಪ್ಲೋಮ್ ಮುಗಿಸಿದ ಅಭ್ಯರ್ಥಿಗಳಿಗೆ — 75 ಹುದ್ದೆಗಳು

ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು?

ಮೇಲೆ ನೀಡಿರುವ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅದೇ ರೀತಿ ವಯೋಮಿತಿ ನೋಡುವುದಾದರೆ ಅಭ್ಯರ್ಥಿಗಳು ಕನಿಷ್ಠ 18 ವರ್ಷದ ಮೇಲಿರಬೇಕು.

ಮಾಸಿಕ ವೇತನ ಎಷ್ಟಿರಲಿದೆ?

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 8,000ರೂ. ನಿಂದ 9,000ರೂ. ವರೆಗೆ ನೀಡಲಾಗುತ್ತದೆ.

  ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು :

* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭ ದಿನಾಂಕ — 01 ಫೆಬ್ರವರಿ 2025

* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ — 20 ಫೆಬ್ರವರಿ 2025

ಅರ್ಜಿ ಸಲ್ಲಿಸಲು ಜಾಲತಾಣ :

https://nats.education.gov.in/


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ