ಹೋಂಗಾರ್ಡ್ ಹುದ್ದೆಗಳ ನೇಮಕಾತಿ: ಜಸ್ಟ್ 10th ಪಾಸಾದವರು ಅರ್ಜಿ ಸಲ್ಲಿಸಬಹುದು - Mahanayaka

ಹೋಂಗಾರ್ಡ್ ಹುದ್ದೆಗಳ ನೇಮಕಾತಿ: ಜಸ್ಟ್ 10th ಪಾಸಾದವರು ಅರ್ಜಿ ಸಲ್ಲಿಸಬಹುದು

home guard jobs
07/02/2025


Provided by

Home Guard Jobs 2025 — ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಖಾಲಿ ಇರುವಂತಹ ಗೃಹರಕ್ಷಕ ಮತ್ತು ಗೃಹರಕ್ಷಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಪುರುಷರು ಅಷ್ಟೇ ಅಲ್ಲದೆ ಮಹಿಳೆಯರಿಗೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ.


Provided by

ಒಟ್ಟು 140 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು, ಈ ನೇಮಕಾತಿ ಅರ್ಜಿ ಸಲ್ಲಿಕೆಗೆ ಬೇಕಾಗಿರುವಂತಹ ಸಂಪೂರ್ಣ ಅರ್ಹತೆ ವಿವರ, ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ ಸೇರಿದಂತೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?


Provided by

ಗೃಹರಕ್ಷಕ ಅಥವಾ ಗೃಹರಕ್ಷಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಪ್ರಮುಖವಾಗಿ 10ನೇ ತರಗತಿ ಪಾಸ್ ಆಗಿರಬೇಕು. ಅದೇ ರೀತಿ ವಯೋಮಿತಿ ಅರ್ಹತೆ ನೋಡುವುದಾದರೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿದ್ದು ಗರಿಷ್ಟ 45 ವರ್ಷದ ಒಳಗಿರಬೇಕು. ಇದರೊಂದಿಗೆ ಅಭ್ಯರ್ಥಿಯು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು.

ಮೇಲಿನ ಅರ್ಹತೆ ಹೊಂದಿದ್ದರು, ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಮೇಲೆ ಯಾವುದೇ ರೀತಿಯ ಪೊಲೀಸ್ ಪ್ರಕರಣಗಳು ಇರಬಾರದು ಹಾಗೂ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಗಳ ಕಾರ್ಯಕರ್ತರಾಗಿರಬಾರದು.

ಅರ್ಜಿ ಸಲ್ಲಿಸುವ ಮಾಹಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಅರ್ಹತೆ ಹೊಂದಿದ್ದಲ್ಲಿ, ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ ಖುದ್ದಾಗಿ ಅರ್ಜಿ ಸಲ್ಲಿಸಬೇಕು.

ವಿಳಾಸ : ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಕಾರವಾರ,  ಗೃಹರಕ್ಷಕ ದಳದ ಸಮಾದೇಷ್ಟರು. ಉತ್ತರ ಕನ್ನಡ ಜಿಲ್ಲೆ  ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ – 08382-200137 ಅಥವಾ 94808 98775 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ — 07 ಮಾರ್ಚ್ 2025.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ