ನಿವೃತ್ತಿಯ ವಯಸ್ಸಿನಲ್ಲಿ ಮಹಿಳೆಯ ಬೆತ್ತಲೆ ವಿಡಿಯೋ ಕೇಳಿದ ನೌಕರ | ವಿಡಿಯೋ ಸಿಕ್ಕಿದ ಮೇಲೆ ಆತ ಮಾಡಿದ್ದೇನು ಗೊತ್ತಾ?
06/04/2021
ಕಲಬುರಗಿ: ಗುಲ್ಬರ್ಗಾ ವಿವಿ ಗ್ರಂಥಾಲಯದಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುವ ಮಹಿಳೆಗೆ ಖಾಯಂ ನೌಕರಿಯ ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಗುಲ್ಬರ್ಗಾ ವಿವಿಯಲ್ಲಿ ಬೆಳಕಿಗೆ ಬಂದಿದೆ.
ಶರಣಪ್ಪ ಎಂಬಾತ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನ ಬೆತ್ತಲೆ ವಿಡಿಯೋ ಕಳುಹಿಸಿದರೆ, ಕೆಲಸ ಪರ್ಮನೆಂಟ್ ಮಾಡುತ್ತೇನೆ ಎಂದು ಆಸೆ ತೋರಿಸಿದ್ದ. ಇದರಂತೆ ಮಹಿಳೆ ಆತನಿಗೆ ವಿಡಿಯೋ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಡಿಯೋವನ್ನು ಶರಣಪ್ಪ ಗ್ರೂಪ್ ವೊಂದಕ್ಕೆ ಶೇರ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮೇ ತಿಂಗಳು ಅಂದರೆ, ಮುಂದಿನ ತಿಂಗಳಿನಲ್ಲಿಯೇ ಆರೋಪಿ ಶರಣಪ್ಪ ನಿವೃತ್ತಿಯಾಗುತ್ತಿದ್ದ. ಆದರೆ ನಿವೃತ್ತಿಯಾಗುವ ವಯಸ್ಸಿನಲ್ಲಿ ಇಂತಹ ಗಲೀಜು ಕೆಲಸಕ್ಕೆ ಕೈಹಾಕಿದ್ದು, ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.