ಪೋಸ್ಟ್ ಶೇರ್ ಮಾಡೋ ಮುನ್ನ ಎಚ್ಚರ: 'ಹಿಂದೂಗಳೇ, ನೀವು ಮಲಗಿಯೇ ಇರಿ' ಎಂಬ ಸುಳ್ಳು ಪೋಸ್ಟ್ ನ ಅಸಲಿಯತ್ತು ಕೊನೆಗೂ ಬಯಲು - Mahanayaka
7:37 AM Sunday 14 - September 2025

ಪೋಸ್ಟ್ ಶೇರ್ ಮಾಡೋ ಮುನ್ನ ಎಚ್ಚರ: ‘ಹಿಂದೂಗಳೇ, ನೀವು ಮಲಗಿಯೇ ಇರಿ’ ಎಂಬ ಸುಳ್ಳು ಪೋಸ್ಟ್ ನ ಅಸಲಿಯತ್ತು ಕೊನೆಗೂ ಬಯಲು

14/08/2024

ನಾನು ಅವರನ್ನು ಹೇಗೆ ಕರೆಯಬೇಕು..? ಇಸ್ಲಾಮಿಕ್ ಜಿಹಾದಿಗಳು ಎಂದು ಕರೆಯಬೇಕೊ ಅಥವಾ ಮೃಗಗಳು ಎಂದು ಕರೆಯಬೇಕೋ..? ಬಾಂಗ್ಲಾದೇಶದ ನೋಕಾಲಿ ಎಂಬಲ್ಲಿ ರಾಕ್ಷಸರು ಓರ್ವ ಹಿಂದೂ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಅತ್ಯಾಚಾರ ಮಾಡಿದ್ದಾರೆ ಮತ್ತು ಬಳಿಕ ಬಿಟ್ಟು ಹೋಗಿದ್ದಾರೆ. ಹಿಂದೂಗಳೇ, ನೀವು ಮಲಗಿಯೇ ಇರಿ’ ಎಂಬ ಶೀರ್ಷಿಕೆಯಲ್ಲಿ ಆಗಸ್ಟ್ 9ರಂದು ದೀಪಕ್ ಶರ್ಮ ಎಂಬುವವರು ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದನ್ನು ಹದಿನೈದು ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದರು.


Provided by

ಕೆಲವು ದಿನಗಳವರೆಗೆ ದೇಶದ ಅಸಂಖ್ಯ ವಾಟ್ಸಾಪ್ ಗಳಲ್ಲಿ ಈ ವಿಡಿಯೋ ಹರಿದಾಡಿತ್ತು. ಆದರೆ ಇದೀಗ ಈ ವಿಡಿಯೋದ ಅಸಲಿ ಮುಖ ಬಹಿರಂಗವಾಗಿದೆ.
ಆದರೆ ಇದು ಸುಳ್ಳು ಸುದ್ದಿ ಎಂದು ಫ್ಯಾಕ್ಟ್ ನಲ್ಲಿ ಬಹಿರಂಗವಾಗಿದೆ. ಬಾಂಗ್ಲಾದೇಶದ ಬಿಡಿ ನ್ಯೂಸ್ 24 ಈ ಕುರಿತಂತೆ ಸುದ್ದಿಯನ್ನು ಪ್ರಕಟಿಸಿದ್ದು ಅದನ್ನು ಫ್ಯಾಕ್ಟ್ ಚೆಕ್ ಮಾಡುವ ಆಲ್ಟ್ ನ್ಯೂಸ್ ಮರು ಪ್ರಕಟಿಸಿದೆ.

ಇದು ಹಿಂದೂ ಮುಸ್ಲಿಂ ಜಗಳವಲ್ಲ. ಅಥವಾ ಹಿಂದೂ ಯುವತಿಯನ್ನು ಈ ರೀತಿಯಾಗಿ ಎತ್ತಿಕೊಂಡು ಹೋದದ್ದೂ ಅಲ್ಲ. ಇದು ಕೌಟುಂಬಿಕ ಜಗಳಕ್ಕೆ ಸಂಬಂಧಿಸಿದ ವಿಡಿಯೋ. ಆಗಸ್ಟ್ 8ರಂದು ಈ ಘಟನೆ ನಡೆದಿತ್ತು. ಗಂಡ ಪ್ರಸಿನ್ ಜಿತ್ ಅವರ ದೌರ್ಜನ್ಯವನ್ನು ಪ್ರಶ್ನಿಸಿ ಪತ್ನಿ ತವರು ಮನೆಗೆ ಹೋಗಿದ್ದಳು. ಇದರಿಂದ ಕುಪಿತನಾದ ಗಂಡ ಎರಡು ವಾಹನಗಳಲ್ಲಿ 18 ಮಂದಿಯನ್ನು ಸೇರಿಸಿಕೊಂಡು ಆಕೆಯ ತವರುಮನೆಗೆ ಹೋಗಿದ್ದಾನೆ ಮತ್ತು ಬಲವಂತದಿಂದ ಆಕೆಯನ್ನು ಎತ್ತಿಕೊಂಡು ಬಂದಿದ್ದಾನೆ.. ಈ ನಡುವೆ ಆಕೆಯ ಬೊಬ್ಬೆಗೆ ಊರವರು ಸೇರಿದ್ದು ಪ್ರಸಿನ್ಜಿತ್ ಮತ್ತು ಇತರರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆತನಿಂದ ವಿಚ್ಛೇದನ ಕೋರಿ ಆಕೆ ಈಗಾಗಲೇ ನ್ಯಾಯಾಲಯದ ಮೆಟ್ಟಲು ಹತ್ತಿದ್ದಳು ಮತ್ತು ನ್ಯಾಯಾಲಯದ ಆವರಣದಲ್ಲಿ ಆಕೆಯನ್ನು ಅಪಹರಿಸಲು ಈ ಹಿಂದೆ ಶ್ರಮ ನಡೆಸಲಾಗಿತ್ತು. ಆದರೆ ಆ ಶ್ರಮ ಈಡೇರಿರಲಿಲ್ಲ. ಆದರೆ ಇದೀಗ ಮುಸ್ಲಿಂ ವಿರೋಧಿಗಳು ಇದನ್ನು ಹಿಂದೂ ಮುಸ್ಲಿಂ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ