ಪುನರ್ ಜನ್ಮ: ‘ತಾನು ಬದುಕಲ್ಲ’ ಎಂದಿದ್ದ ವ್ಯಕ್ತಿಯನ್ನು ಬದುಕಿಸಿದ ಯುಎಇ ವೈದ್ಯರು
ಬದುಕುಳಿಯುವುದೇ ಅಸಾಧ್ಯ ಎಂದುಕೊಂಡಿದ್ದ 42 ವರ್ಷದ ನೂರಾ ಅವರು ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಯುಎಇಯಲ್ಲಿ ವಾಸಿಸುತ್ತಿರುವ ಇಂಡೋನೇಷ್ಯಾದ ಈ ನೂರ ಅವರನ್ನು ತುರ್ತು ಶಸ್ತ್ರ ಚಿಕಿತ್ಸೆಯ ಮೂಲಕ ಯುಎಇ ವೈದ್ಯರು ಬದುಕುಳಿಸಿದ್ದಾರೆ.
ಪೂರ್ಣ ಆರೋಗ್ಯವಂತೆಯಾಗಿದ್ದ ಇಂಡೋನೇಷ್ಯಾದ ಈ ನೂರಾರಿಗೆ ಸೆರೋ ನೆಗೆಟಿವ್ ಹೆಪಟೈಟಿಸ್ ಕಾರಣದಿಂದ ಉಂಟಾದ ಅಸೌಖ್ಯವು ತಕ್ಷಣ ಕರುಳಿನ ಚಟುವಟಿಕೆಯನ್ನು ನಿಲ್ಲಿಸಿತು. 48 ಗಂಟೆಯಿಂದ 72 ಗಂಟೆಯ ಒಳಗೆ ಕರುಳನ್ನು ತೆರವುಗೊಳಿಸುವುದೇ ಇದಕ್ಕಿರುವ ಪರಿಹಾರವಾಗಿತ್ತು. ತಕ್ಷಣ ಅವಯವ ದಾನ ಮಾಡುವವರ ಕುರಿತಂತೆ ಪತ್ತೆಹಚ್ಚಲು ಯು ಏ ಇ ಉದ್ದಕ್ಕೂ ವೈದ್ಯರು ಸೂಚನೆ ನೀಡಿದರು. ಆದರೆ ಇದು ಫಲ ನೀಡಲಿಲ್ಲ. ಈ ನಡುವೆ ಜೀಸಿಸಿ ರಾಷ್ಟ್ರಗಳ ಉದ್ದಕ್ಕೂ ಇಂಥದ್ದೊಂದು ಅವಯವ ದಾನ ಸಾಧ್ಯವೇ ಅನ್ನುವ ಕುರಿತು ಸರಕಾರವೇ ಸರ್ಚ್ ನಡೆಸಿತು. ಇದು ಫಲ ನೀಡಿತು. ಮತ್ತು ಕರುಳು ಸಿಗುವ ಬಗ್ಗೆ ಮಾಹಿತಿ ಲಭ್ಯವಾಯಿತು. ಈ ಕಾರಣದಿಂದ ಡಾಕ್ಟರ್ ರೆಹಾನ್ ಸೈಫಿ ನೇತೃತ್ವದಲ್ಲಿ ವೈದ್ಯರ ತಂಡ ಶಸ್ತ್ರಕ್ರಿಯೆಗೆ ಸಜ್ಜಾಯಿತು.
ಈ ನಡುವೆ ತುರ್ತಾಗಿ ಕುವೈಟ್ ಗೆ ಹೋಗಿ ಕರುಳನ್ನು ತರುವುದಕ್ಕೆ ಸರಕಾರವು ವಿಶೇಷ ಜೆಟ್ ವಿಮಾನವನ್ನು ವ್ಯವಸ್ಥೆ ಮಾಡಿತು. ಕರುಳನ್ನು ಯುಏ ಇಗೆ ತರುವ ಸಂದರ್ಭದಲ್ಲಿ ಬಿಎಮ್ಎಸ್ ಆಸ್ಪತ್ರೆಯಲ್ಲಿ ನೂರ ಶತ್ರು ಚಿಕಿತ್ಸೆಗೆ ಸರ್ವ ಸಂಪೂರ್ಣವಾಗಿ ಸಿದ್ಧವಾಗಿದ್ದರು. ಆ ಬಳಿಕ ನಡೆದ 14 ಗಂಟೆಗಳ ದೀರ್ಘ ಶಸ್ತ್ರಕ್ರಿಯೆಯಲ್ಲಿ ನೂರಾರಿಗೆ ಯಶಸ್ವಿಯಾಗಿ ಕರುಳನ್ನು ಜೋಡಿಸಲಾಯಿತು. ಕಾಯಿಲೆಯನ್ನು ತಕ್ಷಣ ಅರಿತು ಅದಕ್ಕೆ ಅಷ್ಟೇ ತೀವ್ರವಾಗಿ ಸ್ಪಂದಿಸಿದ ವೈದ್ಯರಿಗೆ ಯುಏಇ ಅಭಿನಂದನೆ ಸಲ್ಲಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth