ಖುಷಿ: ಮುಂದಿನ ವರ್ಷ ಒಂದೂವರೆ ಕೋಟಿ ಮಂದಿಗೆ ಉಮ್ರಾ ನಿರ್ವಹಿಸಲು ವ್ಯವಸ್ಥೆ; ಸೌದಿ ಸರ್ಕಾರ
ಮುಂದಿನ ವರ್ಷ ಒಂದೂವರೆ ಕೋಟಿ ಮಂದಿಗೆ ಉಮ್ರಾ ನಿರ್ವಹಿಸಲು ಬೇಕಾದ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸೌದಿ ಅರೇಬಿಯಾ ತಿಳಿಸಿದೆ. ಗೆಸ್ಟ್ ಆಫ್ ಗಾಡ್ ಸರ್ವಿಸ್ ಪ್ರೋಗ್ರಾಮ್ ಎಂಬ ಹೆಸರಲ್ಲಿ ಹೊಸ ಯೋಜನೆಯನ್ನು ತಯಾರಿಸಲಾಗಿದ್ದು ಇದರಿಂದ ಉಮ್ರಾ ನಿರ್ವಹಣೆ ಸುಲಭವಾಗುತ್ತದಲ್ಲದೆ ಭಾರಿ ಸಂಖ್ಯೆಯಲ್ಲಿ ಉಮ್ರಾ ಯಾತ್ರಾರ್ಥಿಗಳನ್ನು ಮಕ್ಕಾಕ್ಕೆ ಸ್ವಾಗತಿಸಲು ಅನುಕೂಲತೆ ಒದಗಿಸಲಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಯಾತ್ರಾರ್ಥಿಗಳಿಗೆ ಬೇಕಾದ ಸೌಲಭ್ಯವನ್ನು ಒದಗಿಸುವುದು ಮತ್ತು ಅವರ ಯಾತ್ರೆಯನ್ನು ಸುಖಮಯಗೊಳಿಸುವುದು ಈ ಯೋಜನೆಯಲ್ಲಿ ಸೇರಿದೆ. ಹಾಗೆಯೇ ಪ್ರತಿಯೊಂದನ್ನೂ ಡಿಜಿಟಲ್ ಲೈಸ್ ಮಾಡಿ ಮಕ್ಕಾಕ್ಕೆ ಬರ ಬಯಸುವ ಯಾತ್ರಿಕರಿಗೆ ಪ್ರತಿಯೊಂದನ್ನೂ ಸುಲಭಗೊಳಿಸುವುದು ಕೂಡ ಈ ಯೋಜನೆಯ ಭಾಗವಾಗಿದೆ.
2030ರ ವೇಳೆಗೆ 3 ಕೋಟಿ ಉಮ್ರಾ ಯಾತ್ರಿಕರಿಗೆ ಅವಕಾಶ ಮಾಡಿಕೊಡುವ ಉದ್ದೇಶ ಕೂಡ ಈ ಯೋಜನೆಯಲ್ಲಿ ಇದೆ. ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆಯಂತೆ ಯಾತ್ರಾರ್ಥಿಗಳನ್ನು ಸ್ವಾಗತಿಸುವುದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ಪ್ರತಿವರ್ಷ ಮೂರು ಕೋಟಿಯಂತೆ ಯಾತ್ರೆಗಳನ್ನು ಸೌದಿ ಅರೇಬಿಯಾಕ್ಕೆ ಬರಮಾಡಿಕೊಳ್ಳುವ ಉದ್ದೇಶ ಯೋಜನೆಯಲ್ಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth