ಚೀನಾದಿಂದ ಭೂಮಿ ಅತಿಕ್ರಮಣ: ‘ಪ್ರಧಾನಿ ಯಾಕೆ ಮಾತನಾಡುತ್ತಿಲ್ಲ’ ಎಂದು ಕಿಡಿಕಾರಿದ ಬಿಜೆಪಿ ನಾಯಕ
ಲಡಾಖ್‌ನ ಪ್ಯಾಂಗಾಂಗ್ ಸರೋವರದ ಸಮೀಪದಲ್ಲಿ ಚೀನಾ ಭೂಮಿಯನ್ನು ಅಗೆಯುತ್ತಿದೆ ಎಂದು ಅಮೆರಿಕವು ಉಪಗ್ರಹಗಳಿಂದ ಸೆರೆಹಿಡಿದ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಚಿತ್ರಗಳು ಬಿಡುಗಡೆಯಾಗಿ 36 ದಿನಗಳಾಗಿವೆ.
ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪ್ರಧಾನಿ ಮೋದಿ ಕೂಡ ಮೌನವಾಗಿದ್ದಾರೆ ಯಾಕೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ಯನ್ನು ರದ್ದುಗೊಳಿಸಿದ ಬಳಿಕ ಲಡಾಕ್‌ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮೋದಿ ಸರ್ಕಾರ ಘೋಷಿಸಿದೆ. ಲಡಾಕ್ ಈಗ ಮೋದಿ ಸರ್ಕಾರದ ನೇರ ಆಳ್ವಿಕೆಯಲ್ಲಿದೆ. ಅಲ್ಲಿನ, ಪೂರ್ವ ಲಡಾನ್‌ನ ಪ್ಯಾಂಗಾಂಗ್ ಸರೋವರದ ಸುತ್ತಲಿನ ಪ್ರದೇಶದಲ್ಲಿ ಚೀನಾ ಸೇನೆ ದೀರ್ಘಾವಧಿಗಾಗಿ ಆಯುಧಗಳು ಮತ್ತು ಇಂಧನವನ್ನು ಸಂಗ್ರಹಿಸಲು ಭೂಗತ ಬಂಕರ್‌ಗಳನ್ನು ನಿರ್ಮಿಸಿದೆ. ಈ ಪ್ರದೇಶದ ಭಾರತದ ಪ್ರಮುಖ ಸೇನಾ ನೆಲೆಯಲ್ಲಿ ಶಸ್ತ್ರಸಜ್ಜಿತ ವಾಹನಗಳಿಗೆ ಗಟ್ಟಿಯಾದ ಆಶ್ರಯಗಳನ್ನು ಚೀನಾ ನಿರ್ಮಿಸಿಕೊಂಡಿದೆ ಎಂದು ಉಪಗ್ರಹ ಚಿತ್ರಗಳು ತೋರಿಸಿವೆ.
ಬ್ಲ್ಯಾಕ್‌ಸ್ಕೈ ಒದಗಿಸಿದ ಚಿತ್ರಗಳ ಪ್ರಕಾರ, ಮೇ 30 ರಂದು ಸೆರೆಹಿಡಿಯಲಾದ ಒಂದು ಚಿತ್ರವು ದೊಡ್ಡ ಭೂಗತ ಬಂಕರ್‌ಗೆ ಎಂಟು ಇಳಿಜಾರಾದ ಪ್ರವೇಶದ್ವಾರಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇನ್ನೊಂದು ಸಣ್ಣ ಬಂಕರ್, ಐದು ಪ್ರವೇಶದ್ವಾರಗಳನ್ನು ಹೊಂದಿದೆ. 2021-22ರ ಅವಧಿಯಲ್ಲಿಯೇ ಭೂಗತ ಬಂಕರ್‌ಗಳನ್ನು ಚೀನಾ ನಿರ್ಮಿಸಿದೆ. ಅಲ್ಲಿ, ಆಯುಧ ವ್ಯವಸ್ಥೆಗಳು, ಇಂಧನ ಅಥವಾ ಇತರ ವಸ್ತುಗಳನ್ನು ಸಂಗ್ರಹಿಸಲು ಬಳಸಬಹುದಾಗಿದೆ.
2020ರಲ್ಲಿ ಬಿಕ್ಕಟ್ಟು ಪ್ರಾರಂಭವಾದ ಬಳಿಕ ಭಾರತವು ಚೀನಾ ಗಡಿಯುದ್ದಕ್ಕೂ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth