ಮಾನವೀಯತೆ ಮೆರೆದ ಭಗತ್ ಸಿಂಗ್ ಟೀಮ್ ಯುವಕರು: ಮನೆ ಕಳೆದುಕೊಂಡ ವ್ಯಕ್ತಿಗೆ ಬಾಗಿಲು ದಾನ

ಕೊಟ್ಟಿಗೆಹಾರ: ಆಕಸ್ಮಿಕ ಗ್ಯಾಸ್ ಬ್ಲಾಸ್ಟ್ ಕಾರಣವಾಗಿ ತನ್ನ ಮನೆ ಕಳೆದುಕೊಂಡಿದ್ದ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಗಬ್ಗಲ್ ಗ್ರಾಮದ ಬಂಗಾರಪ್ಪ ಅವರ ಸಹಾಯಕ್ಕೆ ಭಗತ್ ಸಿಂಗ್ ನಿಡುವಾಳೆ ಯುವಕರು ಧಾವಿಸಿದ್ದಾರೆ. ಮಾನವೀಯತೆ ಮೆರೆಸಿದ ಈ ಯುವಕರು, ಬಂಗಾರಪ್ಪ ಅವರ ಮನೆಯನ್ನು ಪುನರ್ ನಿರ್ಮಿಸಲು ಸಹಕಾರ ನೀಡಿದ್ದು, ಹೊಸ ಬಾಗಿಲನ್ನು ದಾನವಾಗಿ ಒದಗಿಸಿದ್ದಾರೆ.
ಈ ಹಿಂದೆ ಆಯೋಜಿಸಿದ್ದ ಕೆಟ್ ಟೂರ್ನಮೆಂಟ್ನಲ್ಲಿ ಸಂಗ್ರಹಗೊಂಡ ಶೇ.ಕಾಂಶದ ಹಣವನ್ನು ಈ ಪುಣ್ಯ ಕಾರ್ಯಕ್ಕೆ ಬಳಸಲಾಗಿದೆ. ತಮ್ಮ ತಂಡದ ಆಶಯವನ್ನು ಜನಸೇವೆ ಎಂದು ಪರಿಗಣಿಸಿರುವ ಈ ಯುವಕರು, ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ.
ಈ ಕಾರ್ಯಕ್ಕೆ ಸಾಕ್ಷಿಯಾಗಿರುವ ಸ್ಥಳೀಯರು, ಭಗತ್ ಸಿಂಗ್ ಯುವಕರ ಮಾನವೀಯ ಹಾದಿಯನ್ನು ಶ್ಲಾಘಿಸಿ, ಇತರ ಯುವಕರಿಗೂ ಪ್ರೇರಣೆಯಾಗುವಂತೆ ಕರೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: