ಮೂಡುಬಿದಿರೆ: ಶಿಥಿಲಗೊಂಡಿದ್ದ ಮನೆಯನ್ನು ಪುನರ್ ನಿರ್ಮಿಸಿ ಬಡ ಕುಟುಂಬಕ್ಕೆ ಹಸ್ತಾಂತರಿಸಿದ ಭೀಮ್ ಆರ್ಮಿ - Mahanayaka

ಮೂಡುಬಿದಿರೆ: ಶಿಥಿಲಗೊಂಡಿದ್ದ ಮನೆಯನ್ನು ಪುನರ್ ನಿರ್ಮಿಸಿ ಬಡ ಕುಟುಂಬಕ್ಕೆ ಹಸ್ತಾಂತರಿಸಿದ ಭೀಮ್ ಆರ್ಮಿ

bheem army
28/04/2024

ಶಿರ್ತಾಡಿ: ಮೂಡುಬಿದಿರೆ ತಾಲೂಕಿನ ಶಿರ್ತಾಡಿಯ ಡಾ. ಬಿ.ಆರ್. ಅಂಬೇಡ್ಕರ್ ನಗರ ದಡ್ಡಲ್ ಪಲ್ಕೆಯಲ್ಲಿ ಕರ್ನಾಟಕ ಭೀಮ್ ಆರ್ಮಿ ಮೂಡುಬಿದಿರೆ ತಾಲೂಕು ವತಿಯಿಂದ ವಿಭಿನ್ನ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಇಲ್ಲಿನ ಬಡ ಕುಟುಂಬವೊಂದಕ್ಕೆ  ಕರ್ನಾಟಕ ಭೀಮ್ ಆರ್ಮಿ ದ.ಕ. ಜಿಲ್ಲಾಧ್ಯಕ್ಷ ವಿವೇಕಾನಂದ ಶಿರ್ತಾಡಿ ಅವರ ನೇತೃತ್ವತ್ವದಲ್ಲಿ ಕಾರ್ಯಕರ್ತರೇ ಸೇರಿ ಮನೆ ನಿರ್ಮಿಸಿ ಹಸ್ತಾಂತರ ಮಾಡುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.


Provided by

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಗಣೇಶಪ್ರಸಾದ್ ಹಾಗೂ ಮಹಾನಾಯಕ ಮಾಧ್ಯಮದ ಹಿರಿಯ ಪತ್ರಕರ್ತ ರಾದ ರಾಜೇಶ್ ನೆತ್ತೋಡಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಶ್ರೀ ಕ್ಷೇತ್ರ ಅಲೇರಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪಾಲ್ಯ ಅಂಬೇಡ್ಕರ್ ಭಾವ ಚಿತ್ರಕ್ಕೆ ದೀಪ ಬೆಳಗಿಸಿ  ಮನೆಯ ಕೀ ಯನ್ನು ಮನೆಯವರಿಗೆ ಹಸ್ತಾಂತರಿಸಿದರು.

ಬಳಿಕ ಪತ್ರಕರ್ತ ರಾಜೇಶ್ ನೆತ್ತೋಡಿ ಮಾತನಾಡಿ, ಎಲ್ಲಾ ಕಡೆಯಲ್ಲೂ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತದೆ. ಆದರೆ ಇಲ್ಲಿ ಕರ್ನಾಟಕ ಭೀಮ್ ಆರ್ಮಿ ವತಿಯಿಂದ ವಿಭಿನ್ನ ರೀತಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗಿದೆ. ಇಂದಿನ ಕಾಲದಲ್ಲಿ ಒಬ್ಬರ ಅಭಿವೃದ್ಧಿಯನ್ನು ಸಹಿಸದೆ ಕಾಲೆಳೆಯುವ ದಿನದಲ್ಲಿ ಬಡ ಕುಟುಂಬಕ್ಕೆ ಭೀಮ್ ಆರ್ಮಿ ವತಿಯಿಂದ ಸದಸ್ಯರೇ ಸೇರಿ ಮನೆ ನಿರ್ಮಿಸಿ ಇಂದು ಕೀ ಹಸ್ತಾಂತರಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಿರುವುದು  ನಿಜಕ್ಕೂ ಮಾದರಿ ಹಾಗೂ ಶ್ಲಾಘನೀಯವಾಗಿದೆ. ಇಂತಹ ಕೆಲಸ ಎಲ್ಲಾ ಕಡೆಯಲ್ಲೂ ನಡೆಯಲಿ ಈ ಮೂಲಕ ಬಡ ದಲಿತ ಸಮುದಾಯಗಳು ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಹೇಳಿದರು.


Provided by

ಅಂಬೇಡ್ಕರ್ ಅವರು ಹೇಳಿದಂತೆ ಜೇನಿನಂತ ಸಿಹಿಯನ್ನು ಸವಿಯಲು ನಾವು ಜೇನಿನಂತೆ ಒಗ್ಗಟ್ಟಾಗಬೇಕು, ಅವಾಗ ಮಾತ್ರ ಸಿಹಿಯನ್ನು ಸವಿಯ ಸಾಧ್ಯ. ಇದಕ್ಕಾಗಿ ನಾವು ಒಗ್ಗಟ್ಟಾಗೋಣ  ಎಂದು ಕರೆ ನೀಡಿದರು.

ಸಾಮಾಜಿಕ ಕಾರ್ಯಕರ್ತರಾದ ಶಿವಾನಂದ ಪಾಂಡ್ರು ಮಾತನಾಡಿ, ಇಂತಹ ಅಭಿವೃದ್ಧಿ ಕೆಲಸಗಳು ಎಲ್ಲಾ ಕಡೆಗಳಲ್ಲಿ ನಡೆದರೆ ಸಮಾಜ ಅಭಿವೃದ್ದಿಯಾಗುತ್ತದೆ, ಕರ್ನಾಟಕ ಭೀಮ್ ಆರ್ಮಿ ವತಿಯಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಸಲು ನಾವೂ ಬೆಂಬಲ ನೀಡೋಣ ಎಂಡು ಹೇಳಿದರು.


ಬಾಬಾ ಸಾಹೇಬರು ಇಲ್ಲಿಯ ತನಕ ಎಳೆದುಕೊಂಡು ಬಂದಿರುವ ಸಾಮಾಜಿಕ ಚಳವಳಿಯ ವಿಮೋಚನಾ ರಥವನ್ನು ಕೈ ಜೋಡಿಸಿ ಮುಂದಕ್ಕೆ ಎಳೆಯುವ ಪ್ರಯತ್ನವಾಗಬೇಕು. ಅಂಬೇಡ್ಕರ್ ಜಯಂತಿ ಅನ್ನುವುದು ಕೇವಲ ಕ್ರೀಡಾಕೂಟ, ಮನರಂಜನೆಯ ಭಾಗವಲ್ಲ, ಬದಲಾಗಿ ಅಂಬೇಡ್ಕರ್ ಜಯಂತಿ ಅಂದರೆ ಸಾಮಾಜಿಕ ಸಂಘಟನೆಗಳು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪರಿವರ್ತನೆಯ ಜವಾಬ್ದಾರಿ ಹೊರುವ ದಿನವಾಗಿದೆ ಅದರಂತೆ ಶಿಥಿಲಗೊಂಡ ಮನೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟ ಕರ್ನಾಟಕ ಭೀಮ್ ಆರ್ಮಿ ಶಿರ್ತಾಡಿ ಮೂಡಬಿದಿರೆ ತಾಲೂಕಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೂ ಅಭಿನಂದನೆಗಳು.

–ವಿವೇಕಾನಂದ,  ಶಿರ್ತಾಡಿ, ಅಧ್ಯಕ್ಷರು, ಕರ್ನಾಟಕ ಭೀಮ್ ಆರ್ಮಿ ದ.ಕ.ಜಿಲ್ಲೆ


ಅಂಬೇಡ್ಕರ್ ಅವರು ಹೇಳಿದಂತೆ “ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯವಿದೆಯೋ, ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ್ಯ, ಇಲ್ಲವಾದರೆ ಎರಡು ಸಾಯುತ್ತವೆ” . ಅವರ ವಿಚಾರಧಾರೆಗಳನ್ನು  ಪುಸ್ತಕದಲ್ಲಿ  ಓದಿ ಸುಮ್ಮನೆ ಕುಳಿತಿದ್ದರೆ ಯಾವ ಸಂಗತಿಯು ಅನುಷ್ಠಾನಕ್ಕೆ ಬರುತಿರಲಿಲ್ಲ ,ಬದಲಾಗಿ ಆ ವಿಚಾರಧಾರೆಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ನಾವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಿದ ಭೀಮ್ ಆರ್ಮಿ ಮೂಡುಬಿದಿರೆ ತಾಲೂಕು ಸಂಘಟನೆಯಿಂದ  ಸಾಧ್ಯವಾಯಿತು.

–ಸಂಕೇತ್ ಪಿ. ಮೈಸೂರು, ಚಾರ್ಟರ್ಡ್ ಅಕೌಂಟೆಂಟ್


ಶಿರ್ತಾಡಿ ಗ್ರಾಮದ ಅಂಬೇಡ್ಕರ್ ನಗರ (ದಡ್ಡಲ್ ಪಲ್ಕೆ )ಯಲ್ಲಿ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದ ಮನೆಯೊಂದನ್ನು ಭೀಮ್ ಆರ್ಮಿ ವತಿಯಿಂದ  ಪುನರ್ ನಿರ್ಮಾಣ ಮಾಡುವ ಮೂಲಕ ವಿಶಿಷ್ಟವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯ ನಮಗೆ ಇನ್ನಷ್ಟು ಉತ್ಸಾಹ ತುಂಬಿದ್ದು, ಮುಂದಿನ ದಿನಗಳಲ್ಲಿ ಭೀಮ್ ಆರ್ಮಿ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಚಿಂತನೆ ನಡೆಸಿದ್ದೇವೆ.

–ಸುಂದರ್ ಡಿ., ಭೀಮ್ ಆರ್ಮಿ ಗೌರವಾಧ್ಯಕ್ಷರು , ದ.ಕ.ಜಿಲ್ಲೆ


ಕಾರ್ಯಕ್ರಮದಲ್ಲಿ  ನಿವೃತ್ತ ಬಿಎಸ್ ಎನ್ ಎಲ್  ಉದ್ಯೋಗಿ ನೊಣಯ್ಯ ಮಕ್ಕಿ, ಶ್ರೀ ಅಲೇರಿ ಸತ್ಯಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಮೂಡಬಿದಿರೆ ಜೊತೆ ಕಾರ್ಯದರ್ಶಿ ಗಣೇಶ್ ಪ್ರಸಾದ್, ಕರ್ನಾಟಕ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ವಿವೇಕಾನಂದ ಶಿರ್ತಾಡಿ, ಯೂನಿಯನ್ ಬ್ಯಾಂಕ್ ಉದ್ಯೋಗಿ ಶಿರ್ತಾಡಿ ವಾಸು ಶಿರ್ತಾಡಿ, ಶ್ರೀ ಅಲೇರಿ ಸತ್ಯ ಸಾರಮಾನಿ ಕಾನದ ಕಟದ ಮೂಲಸ್ಥಾನ ಮೂಡುಬಿದಿರೆ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪಾಲ್ಯ, ಶಿರ್ತಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಶೀಲಾ, ಭೀಮ್ ಆರ್ಮಿಯ ದ.ಕ. ಜಿಲ್ಲಾ ಗೌರವಾಧ್ಯಕ್ಷ ಸುಂದರ್ ಡಿ., ತಾಲೂಕು ಅಧ್ಯಕ್ಷ ವಿಜೇತ್, ತಾಲೂಕು ಉಪಾಧ್ಯಕ್ಷ ರಾಜೇಶ್,  ಪ್ರಧಾನ ಕಾರ್ಯದರ್ಶಿ ಸಂದೀಪ್ ಕೆ., ಜೊತೆ ಕಾರ್ಯದರ್ಶಿ  ತೇಜಸ್, ವರುಣ್, ಕೋಶಾಧಿಕಾರಿ ಪ್ರತೀಕ್ಷಾ, ಕಲಾ ಮಂಡಳಿಯ ಸಂಕೇತ್ ಪಿ., ಶೈಲೇಶ್ ಕೆ, ಗೌತಮ್, ಅನಿಲ್, ವಿಶಾಲ್, ಸಂದೇಶ್ ಕೆ., ಶಿವಾನಂದ, ಸುಕೇಶ್, ಅಭಿಷೇಕ್, ಅಭಿನ್ ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ