ಎಲೆಕ್ಷನ್‌ ಅನ್ನು ಗೆಲ್ಲಿಸಿಕೊಡಲಿಲ್ಲ ಸೋಶಿಯಲ್ ಮೀಡಿಯಾ ಜನಪ್ರಿಯತೆ: ನಟ ಆಜಾಜ್‌ಗೆ ಹೀನಾಯ ಸೋಲು - Mahanayaka
5:01 AM Wednesday 20 - August 2025

ಎಲೆಕ್ಷನ್‌ ಅನ್ನು ಗೆಲ್ಲಿಸಿಕೊಡಲಿಲ್ಲ ಸೋಶಿಯಲ್ ಮೀಡಿಯಾ ಜನಪ್ರಿಯತೆ: ನಟ ಆಜಾಜ್‌ಗೆ ಹೀನಾಯ ಸೋಲು

23/11/2024


Provided by

ಸಾಮಾಜಿಕ ಮಾಧ್ಯಮಗಳಲ್ಲಿಯ ಜನಪ್ರಿಯತೆಗೂ ಚುನಾವಣಾ ರಾಜಕಾರಣಕ್ಕೂ ಸಂಬಂಧವೇ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರ ಚುನಾವಣೆಯ ಈ ಒಂದು ಕ್ಷೇತ್ರದ ಫಲಿತಾಂಶ. ವರಸೋವಾ ಕ್ಷೇತ್ರದಿಂದ ನಟ ಆಜಾಜ್ ಖಾನ್ ಎನ್ನುವರು ಸ್ಪರ್ಧಿಸಿದ್ದರು. ಸಾಕಷ್ಟು ಪ್ರಚಾರ ಮಾಡಿದ್ದರು. ವಿಶೇಷವೆಂದರೆ ನಟ ಆಜಾಜ್‌ಗೆ ಇನ್‌ಸ್ಟಾಗ್ರಾಂನಲ್ಲಿ 56 ಲಕ್ಷ ಫಾಲೋವರ್‌ಗಳಿದ್ದಾರೆ. ಆದರೆ ಇವರು ಗಳಿಸಿದ್ದ ಕೇವಲ 139 ಮತಗಳನ್ನು ಮಾತ್ರ.

ಈ ಭಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ನಟ ಆಜಾಜ್ ಖಾನ್ ಎನ್ನುವರು ಸಂಸದ ಚಂದ್ರಶೇಖರ್ ಆಜಾದ್ ರಾವಣ ಅವರ ‘ಆಜಾದ್ ಸಮಾಜ್ ಪಾರ್ಟಿ’ಯಿಂದ ಸ್ಪರ್ಧಿಸಿದ್ದರು. ಫೇಸ್‌ಬುಕ್, ಎಕ್ಸ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅವರು ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರ ಜನಪ್ರಿಯತೆ ಚುನಾವಣೆಯಲ್ಲಿ ಲೆಕ್ಕಕ್ಕೆ ಬಂದಿಲ್ಲ. ಇದರಿಂದ ಆ ನಟ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಾಗಿರುವ ಪ್ರಸ್ತುತ ವರಸೋವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೂನ್ ಖಾನ್ ಅವರು 58 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಆಜಾಜ್ ಅವರಿಗಿಂತಲೂ ಹತ್ತು ಪಟ್ಟು ಅಧಿಕ ಅಂದರೆ 1,222 ಮತಗಳು ನೋಟಾಕ್ಕೆ ಚಲಾವಣೆ ಆಗಿವೆ.
ಆಜಾಜ್ ಖಾನ್ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಹೌದು. ಅನೇಕ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಾನೊಬ್ಬ ರಾಜಕಾರಣಿಯೂ ಹೌದು ಎಂದು ಅವರು ಬರೆದುಕೊಂಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ