ಬಿಜೆಪಿಯ ದ್ವೇಷ ಪಾಲಿಟಿಕ್ಸ್ ಗೆ ಸೋಲು: ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ಪಡೆಗೆ ಗೆಲುವು
ಬುಡಕಟ್ಟು ಜನರ ನೆಲವನ್ನು ಕೋಟ್ಯಾಧಿಪತಿ ಉದ್ಯಮಿಗಳಿಗೆ ಬಿಟ್ಟು ಕೊಡುವ ಸರಕಾರ ನಮಗೆ ಬೇಡ ಎಂಬ ಸ್ಪಷ್ಟ ಸಂದೇಶವನ್ನು ಜಾರ್ಖಂಡಿನ ಜನರು ಬಿಜೆಪಿಗೆ ನೀಡಿದಂತಿದೆ. ಜಾರ್ಖಂಡ್‌ನಲ್ಲಿ ಬಿಜೆಪಿಯ ದ್ವೇಷ ಪ್ರಚಾರಕ್ಕೆ ಸೋಲಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್, ಅಪಪ್ರಚಾರ ಹಾಗು ದ್ವೇಷ ಪ್ರಚಾರವನ್ನು ಮೆಟ್ಟಿ ನಿಂತು ಗೆಲುವಿನ ನಗೆ ಬೀರಿದ್ದಾರೆ.
ನಿಮ್ಮ ಊಟ ಕಸಿದುಕೊಳ್ಳುತ್ತಾರೆ, ನಿಮ್ಮ ಪುತ್ರಿಯರನ್ನು ರಕ್ಷಿಸಿಕೊಳ್ಳಿ, ನಿಮ್ಮ ಭೂಮಿಯನ್ನು ಉಳಿಸಿಕೊಳ್ಳಿ , ನುಸಳುಕೋರರು ಬರ್ತಾರೆ, ಮುಸ್ಲಿಮರು ಎಲ್ಲವನ್ನೂ ನಿಮ್ಮಿಂದ ಕಿತ್ತು ಕೊಳ್ಳುತ್ತಾರೆʼ ಎಂಬ ದ್ವೇಷ ಹಾಗೂ ಸುಳ್ಳನ್ನು ಪ್ರಧಾನಿ ಮೋದಿ ಸೇರಿದಂತೆ ಗೃಹ ಮಂತ್ರಿ ಅಮಿತ್ ಷಾ ಮತ್ತು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಸಹಿತ ಬಿಜೆಪಿಯ ನಾಯಕರು ಜಾರ್ಖಂಡ್ ನಲ್ಲಿ ಹರಡಿದ್ದರು.
ಅಲ್ಲಿನ ಸಿಎಂ ಹೇಮಂತ್ ಸೋರೆನ್ ಬಿಜೆಪಿಯ ಎಲ್ಲಾ ದಾಳಿಗಳನ್ನು ದಿಟ್ಟವಾಗಿ ಎದುರಿಸಿ ವಿಜಯಿಯಾಗಿದ್ದಾರೆ. ಹೇಮಂತ್ ಸೋರೆನ್ ರನ್ನು ಬಿಜೆಪಿ ಭ್ರಷ್ಟಾಚಾರ ಆರೋಪ ಹೊರಿಸಿ ಜೈಲಿಗೆ ಕಳುಹಿಸಿತ್ತು. ಸುಮಾರು 5 ತಿಂಗಳು ಜೈಲಿನಲ್ಲಿದ್ದ ಅವರು ಜೈಲಿನಿಂದ ಹೊರಬಂದಾಗ ಪಕ್ಷವನ್ನು ಉಳಿಸಿ ಕೊಳ್ಳುವ ದೊಡ್ಡ ಸವಾಲು ಎದುರಿಸಿದರು. ಅವರ ಪಕ್ಷದ ಹಿರಿಯ ನಾಯಕ ಚಂಪೈ ಸೋರೆನ್ ಕೈಕೊಟ್ಟು ಬಿಜೆಪಿ ಸೇರಿಕೊಂಡರು.
ಇನ್ನೂ ಬಿಜೆಪಿ , ಸಾಮಾಜಿಕ ಜಾಲತಾಣಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ದ್ವೇಷ ಪ್ರಚಾರ ನಡೆಸಿತು. ತೀರಾ ಕೀಳು ಮಟ್ಟದ ಹಸಿ ಹಸಿ ಸುಳ್ಳಿನ ವಿಡಿಯೋಗಳನ್ನು, ಪೋಸ್ಟರ್ ಗಳನ್ನೂ ಬಿಜೆಪಿ ಹರಿಬಿಟ್ಟಿತು. ಆ ಮೂಲಕವೇ ಬಿಜೆಪಿ ಗೆದ್ದು ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಈ ಎಲ್ಲಾ ದಾಳಿಗಳನ್ನು ಎದುರಿಸಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹಾದಿಯಲ್ಲಿ ಹೇಮಂತ್ ಸೊರೇನ್ ನಡೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj