ಬಿಹಾರದಲ್ಲಿಯೂ ಫಲಿಸಿತು ಬಿಜೆಪಿಯ ಆ ತಂತ್ರ | ಮಿತ್ರಪಕ್ಷ ಜೆಡಿಯುಗಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಗೆ ಮುನ್ನಡೆ - Mahanayaka
12:31 PM Saturday 23 - August 2025

ಬಿಹಾರದಲ್ಲಿಯೂ ಫಲಿಸಿತು ಬಿಜೆಪಿಯ ಆ ತಂತ್ರ | ಮಿತ್ರಪಕ್ಷ ಜೆಡಿಯುಗಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಗೆ ಮುನ್ನಡೆ

10/11/2020


Provided by

ನವದೆಹಲಿ: ಎನ್ ಡಿಎ ಮಿತ್ರಕೂಟದಲ್ಲಿ ಮಿತ್ರಪಕ್ಷಗಳನ್ನು ದುರ್ಬಲಗೊಳಿಸಿ ಬಿಜೆಪಿಯನ್ನು ಬಲಪಡಿಸುವ ಬಿಜೆಪಿಯ ತಂತ್ರ ಬಿಹಾರದಲ್ಲಿಯೂ ಯಶಸ್ವಿಯಾಗಿದೆ.  ಕರ್ನಾಟಕ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಈ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಬಿಜೆಪಿಯು ಇದೀಗ ಬಿಹಾರದಲ್ಲಿಯೂ ಯಶಸ್ವಿಯಾಗಿದೆ.

ಬಿಹಾರದಲ್ಲಿ ಪ್ರಸ್ತುತ 71 ಸ್ಥಾನಗಳಲ್ಲಿ ಮುಂದಿರುವ ಬಿಜೆಪಿಯು ಜೆಡಿಯುಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಜೆಡಿಯು ಕೇವಲ 52 ಸ್ಥಾನಗಳಲ್ಲಿ ಮಾತ್ರವೇ ಮೇಲುಗೈ ಸಾಧಿಸಿದೆ. ಇದೇ ಫಲಿತಾಂಶ ಮುಂದೆ ಹೋದರೆ,  ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ಬದಿಗಿರಿಸಿ ಮುಂದಿನ ದಿನಗಳಲ್ಲಿ ತಾವೇ ಸರ್ಕಾರ ರಚಿಸುವ ಸಾಧ್ಯತೆಗಳು ಹೆಚ್ಚಿವೆ.

ಆರ್ ಜೆಡಿ, ಕಾಂಗ್ರೆಸ್ ಜೊತೆಗೆ ಜೆಡಿಯು ಮೈತ್ರಿ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ ಜೆಡಿಯು 71 ಸ್ಥಾನಗಳಲ್ಲಿ ಗೆಲ್ಲುತ್ತಿತ್ತು. ಆದರೆ, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆಯೇ ಜೆಡಿಯು ಗೆಲ್ಲುವ ಸ್ಥಾನದಲ್ಲಿ ಕುಸಿತ ಕಂಡಿದೆ.

ಇತ್ತೀಚಿನ ಸುದ್ದಿ