ಪೊಲೀಸರ ದೌರ್ಜನ್ಯದಿಂದ ಬೇಸತ್ತು | ಮುಸ್ಲಿಮ್ ಕುಟುಂಬದ ನಾಲ್ವರು ಆತ್ಮಹತ್ಯೆ! - Mahanayaka

ಪೊಲೀಸರ ದೌರ್ಜನ್ಯದಿಂದ ಬೇಸತ್ತು | ಮುಸ್ಲಿಮ್ ಕುಟುಂಬದ ನಾಲ್ವರು ಆತ್ಮಹತ್ಯೆ!

09/11/2020

ಆಂಧ್ರಪ್ರದೇಶ: ಒಂದೇ ಕುಟುಂಬದ ನಾಲ್ವರು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಆತ್ಮಹತ್ಯೆಯ ಬಳಿಕ, ವಿಡಿಯೋವೊಂದು ವೈರಲ್ ಆಗಿದ್ದು, ಪೊಲೀಸರ ದೌರ್ಜನ್ಯದಿಂದಲೇ ಈ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಆಂಧ್ರಪ್ರದೇಶದ ನಂದ್ಯಾಲ್ ಪಟ್ಟಣದಲ್ಲಿರುವ ಶೇಕ್ ಅಬ್ದುಲ್ ಸಲಾಮ್ ಕುಟುಂಬ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದೆ. ಸಾವಿಗೂ ಮೊದಲು  ಅಬ್ದುಲ್ ಶೇಕ್ ಕುಟುಂಬವು ವಿಡಿಯೋ ಮಾಡಿದ್ದು, ಅದರಲ್ಲಿ, ತಮಗೆ ಸಂಬಂಧವೇ ಇಲ್ಲದ ಪ್ರಕರಣಗಳಲ್ಲಿ ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮಿಂದ ಇನ್ನು ಈ ಕಿರುಕುಳವನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 ಕಳೆದ ಬುಧವಾರ ಮಧ್ಯಾಹ್ನ ನಾಲ್ಕು ಮೃತದೇಹಗಳ ಕರ್ನೂಲ್ ಜಿಲ್ಲೆಯ ರೈಲ್ವೆ ಹಳಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೃತದೇಹಗಳು ಅಬ್ದುಲ್ ಸಲಾಮ್ ಕುಟುಂಬದ್ದು ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಹೆಡ್ ಕಾನ್ಸ್ ಸ್ಟೆಬಲ್ ನನ್ನು ಬಂಧಿಸಲಾಗಿದೆ.

ಅಬ್ದುಲ್ ಸಲಾಂ ಇಲ್ಲಿನ ನಂಡ್ಯಾಲ್ ನ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಈ ಕಳ್ಳತನವನ್ನು ಅಬ್ದುಲ್ ಸಲಾಮ್ ಮೇಲೆ ಹೊರಿಸಿ ಜೈಲಿಗೆ ಕಳುಹಿಸಲಾಗಿತ್ತು. ಆ ಬಳಿಕ ಅಬ್ದುಲ್ ಸಲಾಮ್  ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಆ ಬಳಿಕವೂ ಇವರನ್ನು ಪೊಲೀಸರು ಬೆಂಬಿಡದೇ ಕಾಡುತ್ತಿದ್ದರು.  ಬಾಡಿಗೆ ಆಟೋ ಓಡಿಸಲು ಸಲಾಂ ಆರಂಭಿಸಿದರು. ಆದರೆ, ಆ ಬಳಿಕವೂ ಪೊಲೀಸರು ನಿರಂತರವಾಗಿ ಪೀಡಿಸಲು ಆರಂಭಿಸಿದ್ದರು. ಆಭರಣ ಮಳಿಗೆಯ ಮಾಲಕನ ಪರವಹಿಸಿದ್ದ ಪೊಲೀಸರು ನ್ಯಾಯ ಮರೆತು ಒಂದು ಕುಟುಂಬದ ಆತ್ಮಹತ್ಯೆಗೆ ಕಾರಣರಾಗಿದ್ದಾರೆ.

ಇತ್ತೀಚಿನ ಸುದ್ದಿ