ಯುವತಿ ಮನೆಗೆ ಕರೆದಳೆಂದು ಹೋದ ಸಾಫ್ಟ್‌ವೇರ್ ಎಂಜಿನಿಯರ್ ಗೆ ಆಗಿದ್ದೇ ಬೇರೆ!
ಮುಂಬೈ: ಡೇಟಿಂಗ್ ಆಪ್ ನಲ್ಲಿ ಪರಿಚಯವಾದ ಯುವತಿಯ ಬಲೆಯಲ್ಲಿ ಬಿದ್ದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಬರೋಬ್ಬರಿ 6 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಮತ್ತು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಫ್ಟ್ ವೇರ್ ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಯುವತಿಯೊಬ್ಬಳು ಸಾಫ್ಟ್‌ವೇರ್ ಎಂಜಿನಿಯರ್ ದೀಪಾಲಿ ಜೈನ್ ಎಂಬಾತನನ್ನು ಬಲೆಗೆ ಬೀಳಿಸಿದ್ದಾಳೆ. ಬಳಿಕ ತನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದಾಳೆ. ಯುವತಿ ಮನೆಗೆ ಬರಲು ಹೇಳಿದ್ದೇ ತಡ ದೀಪಾಲಿ ಜೈನ್ ಒಂದೇ ಉಸಿರಿಗೆ ಯುವತಿಯ ಮನೆಗೆ ತಲುಪಿದ್ದಾನೆ. ಈ ಸಂದರ್ಭದಲ್ಲಿ ಯುವತಿಯು ಈತನ ಜೊತೆಗೆ ಖಾಸಗಿಯಾಗಿ ಸಮಯ ಕಳೆದಿದ್ದಾಳೆ. ಈ ದೃಶ್ಯಗಳನ್ನು ಇತರ ಮೂವರು ಚಿತ್ರೀಕರಿಸಿಕೊಂಡಿದ್ದಾರೆ.
ಇಷ್ಟೆಲ್ಲ ನಡೆದರೂ ಇದ್ಯಾವುದರ ಪರಿವೇ ಇಲ್ಲದ ದೀಪಾಲಿ ಜೈನ್ ಗೆ ಆ ಇತರ ಮೂವರು ಬಂದು ಹಣಕ್ಕಾಗಿ ಬೇಡಿಕೆ ಇಟ್ಟಾಗ ಬೆವರಲು ಆರಂಭಿಸಿದೆ. ದೀಪಾಲಿ ಜೈನ್ ನನ್ನು ಎತ್ತಿ ರೂಪ್ ವೊಂದರಲ್ಲಿ ಕೂಡಿ ಹಾಕಿದ ಮೂವರು ಆರೋಪಿಗಳು ಹಣ ಕೊಡು ಇಲ್ಲದಿದ್ದರೆ, ನಿನ್ನ ಮೇಲೆ ರೇಪ್ ಕೇಸ್ ಹಾಕಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಮಾನಕ್ಕೆ ಅಂಜಿದ ದೀಪಾಲಿ ಜೈನ್, ತನ್ನ ಮೂರು ಬ್ಯಾಂಕ್ ಖಾತೆಗಳಲ್ಲಿದ್ದ 4 ಲಕ್ಷ ರೂ. ಹಾಗೂ 2 ಲಕ್ಷ ರೂಪಾಯಿಯ ಎಲೆಕ್ಟ್ರಿಕ್ ಸಾಧನವನ್ನು ಆರೋಪಿಗಳಿಗೆ ನೀಡಿದ್ದಾನೆ.
ಇನ್ನೂ ಘಟನೆಯ ಬಗ್ಗೆ ಪೊಲೀಸರಿಗೆ ಹೇಳಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಆರೋಪಿಗಳು ಎಚ್ಚರಿಸಿ ದೀಪಾಲಿ ಜೈನ್ ನನ್ನು ಕಳುಹಿಸಿದ್ದಾರೆ. ಆದರೆ ಆತ ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.