ಚುನಾವಣಾ ಅಕ್ರಮ | ಟ್ರಂಪ್ ಹೇಳಿಕೆಗೆ  ಸ್ವಪಕ್ಷೀಯರಿಂದಲೇ ಆಕ್ಷೇಪ - Mahanayaka
11:16 AM Thursday 12 - September 2024

ಚುನಾವಣಾ ಅಕ್ರಮ | ಟ್ರಂಪ್ ಹೇಳಿಕೆಗೆ  ಸ್ವಪಕ್ಷೀಯರಿಂದಲೇ ಆಕ್ಷೇಪ

07/11/2020

ವಾಷಿಂಗ್ಟನ್: ಚುನಾವಣಾ ಅಕ್ರಮದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳುತ್ತಿರುವುದು ಶುದ್ಧ ಸುಳ್ಳು ಎಂದು ಟ್ರಂಪ್ ಪ್ರತಿನಿಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಸೆನೆಟ್ ಮಿಟ್ ರೊಮ್ನಿ ಹೇಳಿದ್ದು, ಟ್ರಂಪ್ ವಿರುದ್ಧವೇ ಅವರು ಟ್ವೀಟ್ ಮಾಡಿದ್ದಾರೆ.

ಚುನಾವಣೆ ಅಕ್ರಮ, ಅಂಚೆ ಮತ ಎಣಿಕೆ ವಿಳಂಬ, ಮತ ಎಣಿಕೆಯಲ್ಲಿ ವಂಚನೆ ನಡೆದಿದೆ ಎಂದು ಟ್ರಂಪ್ ಮಾಡಿರುವ ಆರೋಪ ಸುಳ್ಳು, ಚುನಾವಣೆಯನ್ನು ಹೈಜಾಕ್ ಮಾಡಲಾಗಿದೆ, ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲದ ವಿಚಾರವಾಗಿದೆ ಎಂದು ಅವರು  ಟ್ರಂಪ್ ಗೆ ತಿರುಗೇಟು ನೀಡಿದ್ದಾರೆ.

ಟ್ರಂಪ್ ಆರೋಪಿಸಿರುವಂತೆ, ಚುನಾವಣಾಧಿಕಾರಿಗಳಿಗೆ ಬೆದರಿಕೆ ಕರೆಗಳನ್ನು ಯಾರು ಮಾಡುತ್ತಿದ್ದಾರೆ ಎಂಬುವುದನ್ನು ಮೊದಲು ಬಹಿರಂಗಪಡಿಸಲಿ, ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಟ್ರಂಪ್ ಹೇಳಿಕೆ ತಪ್ಪು ಎಂದು ರಿಪಬ್ಲಿಕನ್ ಪಕ್ಷದ ಉಥಾ ಸೆನೆಟರ್ ಮಿಟ್ ರೊಮ್ನಿ ಮಹತ್ವದ ಹೇಳಿಕೆ ನೀಡಿದ್ದಾರೆ. ಅಂದ ಹಾಗೆ ರಿಪಬ್ಲಿಕನ್ ಪಕ್ಷದ ಸೆನೆಟ್ ಮಿಟ್ ರೊಮ್ನಿ ಅವರು ಒಂದು ಕಾಲದಲ್ಲಿ  ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ಲೀಡರ್ ಆಗಿದ್ದಾರೆ.


Provided by

ಇತ್ತೀಚಿನ ಸುದ್ದಿ