ದ್ವಿಚಕ್ರ ವಾಹನದಲ್ಲಿ ಕಾನೂನು ಬಾಹಿರವಾಗಿ‌ ಮದ್ಯ ಸಾಗಾಟ! - Mahanayaka

ದ್ವಿಚಕ್ರ ವಾಹನದಲ್ಲಿ ಕಾನೂನು ಬಾಹಿರವಾಗಿ‌ ಮದ್ಯ ಸಾಗಾಟ!

liquor
18/09/2022

ದ್ವಿಚಕ್ರ ವಾಹನದಲ್ಲಿ ಕಾನೂನು ಬಾಹಿರವಾಗಿ‌ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು‌ ತಡೆದು ನಿಲ್ಲಿಸಿದ ಪೊಲೀಸರು‌, ಆತನ ಬಳಿಯಲ್ಲಿದ್ದ 1,615 ರೂಪಾಯಿ ಮೌಲ್ಯದ ಮೈಸೂರ್‌ ಲ್ಯಾನ್ಸರ್‌ ವಿಸ್ಕಿಯ ಒಟ್ಟು  46 ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡ ಘಟನೆ ಕಾರ್ಕಳ ತೆಳ್ಳಾರು ಎಂಬಲ್ಲಿ ಸೆ.17ರಂದು ನಡೆದಿದೆ.

ಸ್ಥಳೀಯ ನಿವಾಸಿ ಸಂತೋಷ ಪೂಜಾರಿ ಎಂಬಾತ ಬಂಧಿತ ಆರೋಪಿ. ಈತ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ದ್ವಿಚಕ್ರ ವಾಹನದಲ್ಲಿ ಮದ್ಯ ತುಂಬಿಕೊಂಡು ಕಾರ್ಕಳ ಬಸ್‌ ನಿಲ್ದಾಣದ ಕಡೆಯಿಂದ ತೆಳ್ಳಾರು ದುರ್ಗಾ ಕಡೆಗೆ ಹೋಗುತ್ತಿದ್ದನು.

ಈ ಬಗ್ಗೆ ಖಚಿತ ಮಾಹಿತಿ‌ ಮೇರೆಗೆ ದ್ವಿಚಕ್ರವಾಹನವನ್ನು ತಡೆದು ನಿಲ್ಲಿಸಿ 1615 ರೂಪಾಯಿ ಮೌಲ್ಯದ ಮೈಸೂರ್‌ ಲ್ಯಾನ್ಸರ್‌ ವಿಸ್ಕಿಯ ಒಟ್ಟು  46 ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್‌ಗಳನ್ನು ಹಾಗೂ 30 ಸಾವಿರ- ರೂಪಾಯಿ ಬೆಲೆಬಾಳುವ ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ