ಅಬ್ಬಬ್ಬಾ ಏನ್ ಆಫರ್ ಗುರು: ತಮ್ಮಿಬ್ಬರು ಮಕ್ಕಳನ್ನು ನೋಡುವ ದಾದಿಗೆ 80 ಲಕ್ಷ ರೂಪಾಯಿ ಸಂಬಳದ ಆಫರ್ ನೀಡಿದ ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿವೇಕ್ ರಾಮಸ್ವಾಮಿ..! - Mahanayaka
10:26 AM Saturday 23 - August 2025

ಅಬ್ಬಬ್ಬಾ ಏನ್ ಆಫರ್ ಗುರು: ತಮ್ಮಿಬ್ಬರು ಮಕ್ಕಳನ್ನು ನೋಡುವ ದಾದಿಗೆ 80 ಲಕ್ಷ ರೂಪಾಯಿ ಸಂಬಳದ ಆಫರ್ ನೀಡಿದ ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿವೇಕ್ ರಾಮಸ್ವಾಮಿ..!

05/10/2023


Provided by

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉತ್ಸುಕರಾಗಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ತಮ್ಮಿಬ್ಬರು ಮಕ್ಕಳನ್ನು ನೋಡಿಕೊಳ್ಳಲು ಬರುವ ದಾದಿಗೆ ಬರೋಬ್ಬರಿ 80 ಲಕ್ಷ ರೂಪಾಯಿ ಸಂಬಳ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

2024ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದರಲ್ಲಿ ಭಾರತೀಯ ಮೂಲಕ ವಿವೇಕ್ ರಾಮಸ್ವಾಮಿ ಅವರು ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಆದರೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಯಾರು ಅನ್ನೋದು ಇನ್ನೂ ಅಂತಿಮವಾಗಿಲ್ಲ.

ಕೋಟ್ಯಾಧೀಶರಾಗಿರುವ ವಿವೇಕ್ ರಾಮಸ್ವಾಮಿ ಅವರು ಭಾರತೀಯ ಮೂಲದ ಅಪೂರ್ವ ಅವರನ್ನು ಮದುವೆ ಆಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದೀಗ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯ ಹುಡುಕಾಟ ನಡೆಸುತ್ತಿದ್ದಾರೆ.

ಸಿಬ್ಬಂದಿ ನೇಮಕಾತಿ ವೆಬ್‌ಸೈಟ್ ನಲ್ಲಿ ಈ ಕುರಿತು ಜಾಹೀರಾತು ನೀಡಿರುವ ವಿವೇಕ್ ರಾಮಸ್ವಾಮಿ ಅವರ ಸಹಾಯಕರು, ರಾಮಸ್ವಾಮಿ ದಂಪತಿಯ ಮಕ್ಕಳನ್ನು ನೋಡಿಕೊಳ್ಳುವ ದಾದಿಗೆ ಬರೋಬ್ಬರಿ 1 ಮಿಲಿಯನ್‌ಗೂ ಹೆಚ್ಚು ಸಂಬಳ ನೀಡೋದಾಗಿ ತಿಳಿಸಿದ್ದಾರೆ. ಅಮೆರಿಕದ ಅತ್ಯಂತ ಪ್ರತಿಷ್ಠಿತ ಕುಟುಂಬದಲ್ಲಿ ಸೇವೆ ಸಲ್ಲಿಸುವ ಅವಕಾಶ ಇದು. ಮಕ್ಕಳ ಬೆಳವಣಿಗೆ ಹಾಗೂ ವಿಕಾಸಕ್ಕೆ ಪೂರಕವಾಗಿ ಕೆಲಸ ಮಾಡುವ ದಾದಿ ಬೇಕಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ದಾದಿಯಾಗಿ ಕಾರ್ಯನಿರ್ವಹಿಸುವವರು ವಾರದಲ್ಲಿ 84 ರಿಂದ 96 ಗಂಟೆ ಕೆಲಸ ಮಾಡಬೇಕು. ಜೊತೆಗೆ ವಾರದ ರಜೆಗಳೂ ಇರುತ್ತವೆ. ಕುಟುಂಬಕ್ಕಾಗಿ ಕೆಲಸ ಮಾಡುವ ಬಾಣಸಿಗರು, ಮನೆ ಕೆಲಸದವರು ಹಾಗೂ ರಕ್ಷಣಾ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು. ಮಕ್ಕಳಿಗೆ ಅಗತ್ಯವಾದ ವಿಶೇಷ ತರಬೇತಿಗಳನ್ನು ನೀಡಬೇಕಾಗುತ್ತದೆ. ಅವರ ಆಟದ ಸ್ಥಳ, ವಸ್ತುಗಳು, ಬಟ್ಟೆಗಳು ಸೇರಿದಂತೆ ಅವರಿಗೆ ಪೂರಕವಾದ ಎಲ್ಲ ಅಗತ್ಯತೆಗಳ ಮೇಲೆ ನಿಗಾ ವಹಿಸಬೇಕು ಎಂದು ಈ ಜಾಹೀರಾತಿನಲ್ಲಿ ಮಾಹಿತಿ ನೀಡಲಾಗಿದೆ.

ಇತ್ತೀಚಿನ ಸುದ್ದಿ