ಸಲ್ಮಾನ್ ಖಾನ್ ಹತ್ಯೆಗೆ ಖತರ್ನಾಕ್ ಪ್ಲ್ಯಾನ್ ಮಾಡಿದ್ದ ಬಿಷ್ಣೋಯ್ ಗ್ಯಾಂಗ್ ಸಂಚು: ಚಾರ್ಜ್ ಶೀಟ್ ನಲ್ಲಿ ಭಯಾನಕ ಮಾಹಿತಿ ಔಟ್ - Mahanayaka
8:26 AM Saturday 20 - December 2025

ಸಲ್ಮಾನ್ ಖಾನ್ ಹತ್ಯೆಗೆ ಖತರ್ನಾಕ್ ಪ್ಲ್ಯಾನ್ ಮಾಡಿದ್ದ ಬಿಷ್ಣೋಯ್ ಗ್ಯಾಂಗ್ ಸಂಚು: ಚಾರ್ಜ್ ಶೀಟ್ ನಲ್ಲಿ ಭಯಾನಕ ಮಾಹಿತಿ ಔಟ್

02/07/2024

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು 25 ಲಕ್ಷ ರೂ.ಗಳ ಒಪ್ಪಂದವನ್ನು ನೀಡಲಾಗಿತ್ತು ಎಂದು ಐದು ಜನರ ವಿರುದ್ಧ ಸಲ್ಲಿಸಲಾದ ಹೊಸ ಚಾರ್ಜ್ ಶೀಟ್ ನಲ್ಲಿ ಬಹಿರಂಗಪಡಿಸಲಾಗಿದೆ. ಜೈಲಿನಲ್ಲಿರುವ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗೆ ಸೇರಿದ ಆರೋಪಿಗಳು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಪಡೆಯಲು ತೀರ್ಮಾನಿಸಿದ್ದರು ಎಂದು ನವೀ ಮುಂಬೈ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.

ಏಪ್ರಿಲ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅನೇಕ ಸುತ್ತು ಗುಂಡು ಹಾರಿಸಿದ್ದರು. ಪನ್ವೇಲ್ ನಲ್ಲಿರುವ ಸಲ್ಮಾನ್ ಖಾನ್ ಅವರ ತೋಟದ ಮನೆಯ ಬಳಿ ಅವರ ಮೇಲೆ ದಾಳಿ ನಡೆಸಲು ಗ್ಯಾಂಗ್ ಯೋಜಿಸಿತ್ತು.

ಗ್ಯಾಂಗ್ ವಿದೇಶದಿಂದ ಶಸ್ತ್ರಾಸ್ತ್ರಗಳನ್ನು ಪಡೆಯಲು ಯೋಜಿಸಿತ್ತು. 2022 ರಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲು ಬಳಸಲಾದ ಟರ್ಕಿ ನಿರ್ಮಿತ ಜಿಗಾನಾ ಪಿಸ್ತೂಲ್ ನಿಂದ ನಟನನ್ನು ಕೊಲ್ಲಲು ಗ್ಯಾಂಗ್ ಉದ್ದೇಶಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ