ಬಿಜೆಪಿ ಅವಿದ್ಯಾವಂತರ ಪಕ್ಷ | ಬಿಜೆಪಿ ಶಾಸಕನ ಹೇಳಿಕೆ ಬೆನ್ನಲ್ಲೇ ವ್ಯಂಗ್ಯಕ್ಕೀಡಾದ ಬಿಜೆಪಿ - Mahanayaka
3:29 AM Thursday 14 - November 2024

ಬಿಜೆಪಿ ಅವಿದ್ಯಾವಂತರ ಪಕ್ಷ | ಬಿಜೆಪಿ ಶಾಸಕನ ಹೇಳಿಕೆ ಬೆನ್ನಲ್ಲೇ ವ್ಯಂಗ್ಯಕ್ಕೀಡಾದ ಬಿಜೆಪಿ

bjp
25/03/2021

ತಿರುವನಂತಪುರಂ: “ಬಿಜೆಪಿ ಅವಿದ್ಯಾವಂತರ ಪಕ್ಷ” ಎಂಬ ಸ್ಲೋಗನ್ ವೊಂದು ಕೇರಳದಾದ್ಯಂತ ಓಡಾಡುತ್ತಿದ್ದು, ಯಾವ ರಾಜ್ಯದಲ್ಲಿ ಅವಿದ್ಯಾವಂತರಿದ್ದಾರೋ ಆ ರಾಜ್ಯಗಳಲ್ಲಿ ಮಾತ್ರವೇ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಬಿಜೆಪಿ ವ್ಯಂಗ್ಯಕ್ಕೀಡಾಗಿದೆ.

ಕೇರಳದಲ್ಲಿ ಗೆದ್ದಿರುವ ಏಕೈಕ ಬಿಜೆಪಿ ಶಾಸಕ ಒ.ರಾಜಗೋಪಾಲ್ ಅವರು ನೀಡಿದ್ದ ಹೇಳಿಕೆ ಇದೀಗ ಕೇರಳದಲ್ಲಿ ವ್ಯಾಪಕ ವೈರಲ್ ಆಗಿದ್ದು, ಪಕ್ಕದ ರಾಜ್ಯಗಳಿಗೂ ಈ ಸುದ್ದಿ ಕಾಲಿಟ್ಟಿದೆ. ಕಳೆದ ಹಲವು ದಿನಗಳಿಂದ ಕರ್ನಾಟಕದಲ್ಲಿಯೂ ರಾಜಗೋಪಾಲ್ ಅವರ ಹೇಳಿಕೆಯ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೇರಳ ರಾಜ್ಯ ಭಿನ್ನವಾಗಿದೆ. ಇಲ್ಲಿ ಎರಡು-ಮೂರು ವಿಭಿನ್ನ ಅಂಶಗಳಿವೆ ಕೇರಳದಲ್ಲಿ ಸಾಕ್ಷರತಾ ಪ್ರಮಾಣ ಶೇ.90ರಷ್ಟಿದೆ ಹಾಗಾಗಿ ಅವರು ಯಾವುದೇ ಒಂದು ವಿಚಾರವನ್ನು ಯೋಚಿಸಿ ತೀರ್ಮಾನಿಸುತ್ತಾರೆ. ಪ್ರಶ್ನೆಗಳನ್ನು ಕೇಳುತ್ತಾರೆ. ಇದು ವಿದ್ಯಾವಂತರ ಅಭ್ಯಾಸಗಳಾಗಿವೆ. ಹೀಗಾಗಿ ಕೇರಳದಲ್ಲಿ ಬಿಜೆಪಿಯ ಬೆಳವಣಿಗೆಗೆ ಇದು ಸಮಸ್ಯೆಯಾಗಿದೆ ಎಂಧು ಅವರು ಹೇಳಿದ್ದಾರೆ.

ಕೇರಳದಲ್ಲಿ ಶೇ.55ರಷ್ಟು ಹಿಂದೂಗಳು ಹಾಗೂ ಶೇ.45ರಷ್ಟು ಅಲ್ಪಸಂಖ್ಯಾತರಿದ್ದಾರೆ. ಹೀಗಾಗಿ ಕೇರಳವನ್ನು ಬೇರೆ ರಾಜ್ಯಗಳಿಗೆ ಹೋಲಿಸಲು ಸಾಧ್ಯವಿಲ್ಲ. ಇಲ್ಲಿನ ಪರಿಸ್ಥಿತಿಗಳು ಬೇರೆಯದ್ದೇ ಇದೆ ಎಂದು ಹೇಳಿದ್ದಾರೆ.




ಬಿಜೆಪಿ ಶಾಸಕನ ಹೇಳಿಕೆ ಇದೀಗ ಕೇವಲ ಕೇರಳ ಮಾತ್ರವಲ್ಲದೇ ಇಡೀ ದೇಶದಲ್ಲಿ ಚರ್ಚೆಗೀಡಾಗುತ್ತಿದೆ. ಇವರು ಹೇಳುತ್ತಿರುವುದು ನಿಜ ಅಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ನಡುವೆ ಬಿಜೆಪಿ ಅನಕ್ಷರ ಪಕ್ಷ ಎಂಬ ಸ್ಲೋಗನ್ ಗಳು ಕಾಣಿಸಿಕೊಂಡಿವೆ.

ಇದನ್ನೂ ಓದಿ:

“ಜೈಶ್ರೀರಾಮ್” ಎಲ್ಲೆಡೆ ಜನಿಸಿದೆ | ಕೇರಳದಲ್ಲಿ ಅಮಿತ್ ಶಾ ಹೇಳಿಕೆ

ಇತ್ತೀಚಿನ ಸುದ್ದಿ