ನ. 12 ರಂದು ಬಿಎಸ್ಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ - Mahanayaka

ನ. 12 ರಂದು ಬಿಎಸ್ಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ

bsp
11/11/2023


Provided by

ಮೂಡುಬಿದಿರೆ: ಬಹುಜನ ಸಮಾಜ ಪಕ್ಷ ದ.ಕ. ಜಿಲ್ಲೆ ಇದರ ವತಿಯಿಂದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನ.12ರಂದು ಬೆಳಗ್ಗೆ 10 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಬಿಎಸ್ಪಿ ದ.ಕ. ಜಿಲ್ಲಾಧ್ಯಕ್ಷ ದೇವಪ್ಪ ಬೋಧ್ ತಿಳಿಸಿದ್ದಾರೆ.

ಸಭೆಗೆ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಸಯೋಜಕರಾದ ಡಾ. ಎಂ.ಕೃಷ್ಣಮೂರ್ತಿ ಮಂಡ್ಯ, ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ರಾಜ್ಯ ಕಾರ್ಯದರ್ಶಿ ಜ್ಹಾಕಿರ್ ಹುಸೇನ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆಗೆ ಜಿಲ್ಲೆ ಹಾಗೂ ಅಸೆಂಬ್ಲಿಯ  ಪಧಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿ, ಪಕ್ಷದ ಬಲವರ್ಧನೆಗೆ, ಸೂಕ್ತ ಸಲಹೆ ಸೂಚನೆಗಳನ್ನು  ನೀಡುವುದರ ಮೂಲಕ, ಸಭೆಯನ್ನು ಯಶಸ್ವಿಗೊಳಿಸುವಂತೆ  ಬಿಎಸ್ಪಿ ದ.ಕ. ಜಿಲ್ಲಾಧ್ಯಕ್ಷ ದೇವಪ್ಪ ಬೋಧ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ