ಬೈಕ್‌ ಗೆ ಡಿಕ್ಕಿ ಹೊಡೆದ ಬಸ್:‌ ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಸಾವು - Mahanayaka
9:26 PM Saturday 13 - September 2025

ಬೈಕ್‌ ಗೆ ಡಿಕ್ಕಿ ಹೊಡೆದ ಬಸ್:‌ ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಸಾವು

police
22/02/2024

ರಾಯಚೂರು: ಸರ್ಕಾರಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್‌ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಮಿಟ್ಟಿಮಲಕಾಪುರ ಬಳಿ ನಡೆದಿದೆ.


Provided by

ರಾಯಚೂರಿನಿಂದ ಮಂತ್ರಾಲಯ ಮಾರ್ಗವಾಗಿ ಬಸ್‌ ಬರುತ್ತಿದ್ದು, ಈ ವೇಳೆ ಮೂವರು ತೆರಳುತ್ತಿದ್ದ ಬೈಕ್‌ ಗೆ  ಡಿಕ್ಕಿಯಾಗಿದ್ದು, ಮೂವರು ಬೈಕ್‌ ಸವಾರರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರ ಮೃತದೇಹವನ್ನು ರಾಯಚೂರು ರಿಮ್ಸ್‌ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಯರಗೇರಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ