ಬೈಕ್ ಗೆ ಬಸ್ ಡಿಕ್ಕಿ: ಬೈಕ್‌ ಸವಾರನ ದಾರುಣ ಸಾವು - Mahanayaka

ಬೈಕ್ ಗೆ ಬಸ್ ಡಿಕ್ಕಿ: ಬೈಕ್‌ ಸವಾರನ ದಾರುಣ ಸಾವು

kundapur
29/11/2023

ಬ್ರಹ್ಮಾವರ: ಬ್ರಹ್ಮಾವರ ಬೇಳೂರುಜೆಡ್ಡು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌  ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಪ್ರೀತಮ್ ಅಂತೋನಿ ಡಿಸಿಲ್ವ (30) ಎಂದು ಗುರುತಿಸಲಾಗಿದೆ. ಇವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕಿಗೆ ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಬರುತ್ತಿದ್ದ ದುರ್ಗಾಂಬ ಬಸ್ ಡಿಕ್ಕಿ ಹೊಡೆಯಿತು.

ಇದರಿಂದ ಬಸ್ಸಿನಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಪ್ರೀತಮ್ ಸ್ಥಳದಲ್ಲಿಯೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ