ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ: ವಿದ್ಯುತ್ ಕಂಬ ತುಂಡು, ಬಸ್ ಜಖಂ - Mahanayaka
6:39 PM Thursday 18 - December 2025

ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ: ವಿದ್ಯುತ್ ಕಂಬ ತುಂಡು, ಬಸ್ ಜಖಂ

moodigere
29/10/2023

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ  ಖಾಸಗಿ ಬಸ್ ಡಿಕ್ಕಿ ಹೊಡೆದಿರುವ ಘಟನೆ ಮೂಡಿಗೆರೆಯ ಬಿಳಗುಳ  ಸಮೀಪ ನಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಎರಡು ವಿದ್ಯುತ್ ಕಂಬ ತುಂಡಾಗಿ, ಬಸ್ ಜಖಂ ಆಗಿದೆ. ಬೆಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ಪ್ರತಿ ನಿತ್ಯ ಬರುತಿದ್ದ ಕಾವೇರಿ ಬಸ್  ಬೆಳೆಗ್ಗಿನ ಜಾವ ಡಿಕ್ಕಿ ಆಗಿದೆ.

ಶೌರ್ಯ ವಿಪತ್ತು ನಿರ್ವಹಣಾ ತಂಡ ಮೂಡಿಗೆರೆ ಮತ್ತು 112 ಸ್ಥಳಕ್ಕೆ ಧಾವಿಸಿ ಸ್ಪಂದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿ