ಮದೀನಾದ ವಿಮಾನ ನಿಲ್ದಾಣದಿಂದ ಮಸ್ಜಿದುನ್ನಬವಿಗೆ ಎಲ್ಲಾ ಸಮಯದಲ್ಲೂ ಬಸ್ ವ್ಯವಸ್ಥೆ - Mahanayaka

ಮದೀನಾದ ವಿಮಾನ ನಿಲ್ದಾಣದಿಂದ ಮಸ್ಜಿದುನ್ನಬವಿಗೆ ಎಲ್ಲಾ ಸಮಯದಲ್ಲೂ ಬಸ್ ವ್ಯವಸ್ಥೆ

07/03/2025


Provided by

ಮದೀನಾದ ವಿಮಾನ ನಿಲ್ದಾಣದಿಂದ ಮಸ್ಜಿದುನ್ನಬವಿಗೆ ಎಲ್ಲಾ ಸಮಯದಲ್ಲೂ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಮೀರ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಮಝಾನ್ ತಿಂಗಳ ಉದ್ದಕ್ಕೂ ಮಸ್ಜಿದುನ್ನಬವಿಗೆ 24 ಗಂಟೆಯೂ ಬಸ್ ಸೇವೆ ಲಭ್ಯವಿದೆ ಎಂದು ತಿಳಿದು ಬಂದಿದೆ.


Provided by

ಇದು ಬಹಳ ಪ್ರಯೋಜನಕಾರಿ ವ್ಯವಸ್ಥೆಯಾಗಿದ್ದು ಇದರಿಂದ ಮದೀನಾದ ಮಸ್ಜಿದುನ್ನಬವಿಗೆ ಬರುವವರಿಗೆ ಬಹಳ ಉಪಕಾರವಾಗಲಿದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ವಿಮಾನ ನಿಲ್ದಾಣದಿಂದ ಬಸ್ಸುಗಳ ಹೊರತಾಗಿ ಬೇರೆ ಬೇರೆ ವಾಹನಗಳಲ್ಲಿ ಬರುವವರಿದ್ದಾರೆ. ಬಸ್ಸುಗಳು 24 ಗಂಟೆ ಲಭ್ಯವಿಲ್ಲದೆ ಇರುವುದರಿಂದಲೂ ಹೀಗಾಗುತ್ತಿತ್ತು. ಆದರೆ ಇದೀಗ ರಮಝಾನ್ ನ ಉದ್ದಕ್ಕೂ 24 ಗಂಟೆ ಸೇವೆ ಒದಗಿಸಿರುವುದು ಯಾತ್ರಾರ್ಥಿಗಳ ಪಾಲಿಗೆ ಬಹಳ ಪ್ರಯೋಜನಕಾರಿ ಎಂದು ತಿಳಿದು ಬಂದಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ