ಕಾನ್ಪುರದಲ್ಲಿ ಭೀಕರ ಸರಣಿ ರಸ್ತೆ ಅಪಘಾತ: 6 ಮಂದಿ ಸಾವು - Mahanayaka

ಕಾನ್ಪುರದಲ್ಲಿ ಭೀಕರ ಸರಣಿ ರಸ್ತೆ ಅಪಘಾತ: 6 ಮಂದಿ ಸಾವು

kanpura
31/01/2022

ಕಾನ್ಪುರ: ವೇಗವಾಗಿ ಬಂದ ಎಲೆಕ್ಟ್ರಿಕ್ ಬಸ್ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯತತ್ಮಿಲ್ ಕ್ರಾಸ್‌ರೋಡ್‌ನಲ್ಲಿ ಸಂಭವಿಸಿದೆ.
ಅಪಘಾತದಲ್ಲಿ 9 ಮಂದಿ ಗಾಯಗೊಂಡು, ಆರು ಮಂದಿ ಮೃತಪಟ್ಟಿದ್ದಾರೆ.


Provided by

ಭಾನುವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು, ನಿಯಂತ್ರಣ ತಪ್ಪಿದ ಎಲೆಕ್ಟ್ರಿಕ್ ಬಸ್ ಟ್ರಾಫಿಕ್ ಬೂತ್ ಮುರಿದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ.ಅಲ್ಲದೆ ಸ್ವಿಫ್ಟ್ ಕಾರು, ಎರಡು ಬೈಕ್, ಎರಡು ಸ್ಕೂಟಿ, ಒಂದು ಟೆಂಪೋ, ಒಂದು ಝೆನ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ವಾಹನಗಳು ಜಖಂಗೊಂಡಿವೆ. ಈ ಸರಣಿ ಅಪಘಾತದಲ್ಲಿ ಸಾವಿಗೀಡಾದ 6 ಮಂದಿ ಪೈಕಿ ನಾಲ್ವರನ್ನು ಗುರುತಿಸಲಾಗಿದ್ದು, ಇನ್ನುಳಿದವರ ಗುರುತು ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ಬಸ್ ಚಾಲಕ ಪರಾರಿಯಾಗಿದ್ದು,ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರು ಅಡ್ಡಗಟ್ಟಿ ಕಾನ್‌ ಸ್ಟೆಬಲ್‌ ಮೇಲೆ ಹಲ್ಲೆ, ಕೊಲೆ ಬೆದರಿಕೆ

ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ: ಬಿಜೆಪಿ ಕಾರ್ಯಕರ್ತರಿಂದ ಪಕ್ಷದ ಕಚೇರಿ ಲೂಟಿ

ನಾಳೆ ಖಾಸಗೀಕರಣ ನೀತಿ ವಿರೋಧಿಸಿ ವಿದ್ಯುತ್‌ ನೌಕರರು ದೇಶವ್ಯಾಪಿ ಪ್ರತಿಭಟನೆ

ಭಾರೀ ಮಳೆಗೆ ಬ್ರೆಜಿಲ್ ತತ್ತರ: ಭೂಕುಸಿತಕ್ಕೆ ಕನಿಷ್ಠ 18 ಸಾವು

ಏಪ್ರಿಲ್‌ ಒಳಗೆ ತಾ.ಪಂ., ಜಿ.ಪಂ. ಚುನಾವಣೆ: ಸಚಿವ ಈಶ್ವರಪ್ಪ

 

 

ಇತ್ತೀಚಿನ ಸುದ್ದಿ