ವಿನೇಶ್ ಫೋಗಟ್ ಒಲಿಂಪಿಕ್ಸ್ ಅನರ್ಹ ತೀರ್ಪು: ಸಿಎಎಸ್ ತೀರ್ಪು ಮತ್ತೆ ಮುಂದೂಡಿಕೆ
ಒಲಿಂಪಿಕ್ ಅನರ್ಹತೆಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ವಿನೇಶ್ ಫೋಗಟ್ ಅವರ ಮೇಲ್ಮನವಿಯ ಭವಿಷ್ಯದ ಬಗ್ಗೆ ಸಸ್ಪೆನ್ಸ್ ಮುಂದುವರೆದಿದೆ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ತಾತ್ಕಾಲಿಕ ವಿಭಾಗವು ಈ ವಿಷಯವನ್ನು ಮುಂದೂಡಲು ಕಾರಣಗಳನ್ನು ಹೇಳದೇ ತನ್ನ ತೀರ್ಪನ್ನು ನೀಡಲು ಸಮಯ ಮಿತಿಯನ್ನು ಆಗಸ್ಟ್ 16 ರವರೆಗೆ ವಿಸ್ತರಿಸಿದೆ.
ಕಳೆದ ವಾರ ಬುಧವಾರ ನಡೆದ ಮಹಿಳಾ 50 ಕೆಜಿ ಫ್ರೀ ಸ್ಟೈಲ್ ಫೈನಲ್ ನಿಂದ 29 ವರ್ಷದ ಆಟಗಾರ್ತಿ 100 ಗ್ರಾಂ ತೂಕ ಹೊಂದಿದ್ದಕ್ಕಾಗಿ ಅನರ್ಹರಾಗಿದ್ದರು.
ವಿನೇಶ್ ಫೋಗಟ್ ವರ್ಸಸ್ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯೂ) ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ವಿಷಯದಲ್ಲಿ ಏಕೈಕ ಮಧ್ಯಸ್ಥಿಕೆದಾರ ಡಾ.ಅನ್ನಾಬೆಲ್ಲೆ ಬೆನೆಟ್ ಅವರಿಗೆ ಸಿಎಎಸ್ ತಾತ್ಕಾಲಿಕ ವಿಭಾಗದ ಅಧ್ಯಕ್ಷರು ಆಗಸ್ಟ್ 16, 2024 ರ ಶುಕ್ರವಾರ ಸಂಜೆ 6:00 ರವರೆಗೆ (ಪ್ಯಾರಿಸ್ ಸಮಯ) ವಿಸ್ತರಿಸಲು ಅನುಮತಿ ನೀಡಿದ್ದಾರೆ ಎಂದು ಐಒಎ ಪ್ರಕಟಣೆ ತಿಳಿಸಿದೆ.
ಇದು ಪ್ರಕರಣದ ಮೂರನೇ ಮುಂದೂಡಿಕೆಯಾಗಿದೆ.
ಸೆಮಿಫೈನಲ್‌ನಲ್ಲಿ ತನ್ನ ವಿರುದ್ಧ ಸೋತಿದ್ದ ಕ್ಯೂಬಾದ ಕುಸ್ತಿಪಟು ಯೂಸ್ನೆಲಿಸ್ ಗುಜ್ಮನ್ ಲೋಪೆಜ್ ಅವರೊಂದಿಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನೇಶ್ ತನ್ನ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth