ತೆಲಂಗಾಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಅಮಿತ್ ಶಾ ವಿರುದ್ಧ ಕೇಸ್ ದಾಖಲು - Mahanayaka

ತೆಲಂಗಾಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಅಮಿತ್ ಶಾ ವಿರುದ್ಧ ಕೇಸ್ ದಾಖಲು

04/05/2024

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೆಲಂಗಾಣ ರಾಜ್ಯ ಕಾಂಗ್ರೆಸ್ ಘಟಕ ದೂರು ದಾಖಲಿಸಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಉಪಾಧ್ಯಕ್ಷ ನಿರಂಜನ್ ರೆಡ್ಡಿ ಅವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ನೀಡಿದ ದೂರಿನಲ್ಲಿ ಮೇ 1 ರಂದು ನಡೆದ ಬಿಜೆಪಿ ರ್ಯಾಲಿಯಲ್ಲಿ ಕೆಲವು ಮಕ್ಕಳು ಅಮಿತ್ ಶಾ ಅವರೊಂದಿಗೆ ಡಯಾಸ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ರ್ಯಾಲಿಯಲ್ಲಿ ಮಗುವೊಂದು ಕೈಯಲ್ಲಿ ಬಿಜೆಪಿ ಚಿಹ್ನೆಯನ್ನು ಹಿಡಿದಿರುವುದು ಕಂಡುಬಂದಿದ್ದು, ಇದು ಮಾದರಿ ನೀತಿ ಸಂಹಿತೆಯ (ಎಂಸಿಸಿ) ಉಲ್ಲಂಘನೆಯಾಗಿದೆ ಎಂದು ನಿರಂಜನ್ ರೆಡ್ಡಿ ಹೇಳಿದ್ದಾರೆ‌.

ರೆಡ್ಡಿ ಅವರು ತೆಲಂಗಾಣ ಸಿಇಒಗೆ ಕಳುಹಿಸಿದ ಇ-ಮೇಲ್ ನಲ್ಲಿ, “ಚುನಾವಣಾ ಆಯೋಗವು ಇತ್ತೀಚೆಗೆ ರಾಜಕೀಯ ಪಕ್ಷಗಳಿಗೆ ಮಕ್ಕಳ ಸೇವೆಗಳನ್ನು ಮತ್ತು ಚುನಾವಣೆಗೆ ಸಂಬಂಧಿಸಿದ ಅಭಿಯಾನಗಳು ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಬಳಸದಂತೆ ನಿರ್ದೇಶನ ನೀಡಿದೆ” ಎಂದಿದ್ದಾರೆ.


Provided by

ಚುನಾವಣಾ ಅಧಿಕಾರಿಗಳು ನಿರಂಜನ್ ರೆಡ್ಡಿ ಅವರ ದೂರನ್ನು ವಾಸ್ತವಿಕ ವರದಿಗಾಗಿ ಹೈದರಾಬಾದ್ ಪೊಲೀಸರಿಗೆ ರವಾನಿಸಿದ್ದರು. ನಂತರ ಅವರು ಗುರುವಾರ ಅಮಿತ್ ಶಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.


Provided by

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ