ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) ದಿಂದ ಹೊರನಡೆಯುವುದಾಗಿ ಎಐಎಡಿಎಂಕೆ ಘೋಷಿಸಿದೆ. 2024 ರ ಲೋಕಸಭಾ ಚುನಾವಣೆಗೆ ಪ್ರತ್ಯೇಕ ರಂಗವನ್ನು ಮುನ್ನಡೆಸುವುದಾಗಿ ಹೇಳಿದೆ. ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ...
ಸಾಲ ತೆಗೆದು ಅದನ್ನು ಮರಳಿ ಕೊಟ್ಟಿದ್ದರೂ ಸಹ ಬಡ್ಡಿ ಹಣ ಕೊಡಲಿಲ್ಲವೆಂದು ದಲಿತ ಮಹಿಳೆಯ ಬಟ್ಟೆಯನ್ನು ಕಳಚಿ ನಗ್ನಗೊಳಿಸಿ ಹಲ್ಲೆ ನಡೆಸಿದ್ದಲ್ಲದೇ ಆಕೆಯ ಮುಖದ ಮೇಲೆ ಮೂತ್ರ ವಿಸರ್ಜಿಸಿ ಪೈಶಾಚಿಕತೆ ಮೆರೆದಿರುವ ಕೃತ್ಯ ಬಿಹಾರದ ಮೋಸಿಮ್ ಪುರ್ ಗ್ರಾಮದಲ್ಲಿ ನಡೆದಿದೆ. ಆರೋಪಿ ಪ್ರಮೋದ್ ಸಿಂಗ್ ಎಂಬಾತನಿಂದ ಮಹಿಳೆಯ ಪತಿ 1500 ರೂ. ಸಾಲ ಪ...
ಬಿಜೆಪಿ ಶಾಸಕರ ಮನೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಲಕ್ನೋದ ಹಜರತ್ಗಂಜ್ ಪ್ರದೇಶದಲ್ಲಿ ನಡೆದಿದೆ. ಬಿಜೆಪಿಯ ಶಾಸಕ ಯೋಗೇಶ್ ಶುಕ್ಲಾ ಅವರ ನಿವಾಸದಲ್ಲಿ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಹೈದರ್ಗಢ ಮೂಲದ ಶ್ರೇಷ್ಠ ತಿವಾರಿ (24) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕ ಶ್ರೇಷ್ಠ ತಿ...
ಪಾಟ್ನಾ: ಸಾಲ ವಸೂಲಿಯ ನೆಪದಲ್ಲಿ ದಲಿತ ಮಹಿಳೆಯನ್ನು ಥಳಿಸಿ ವಿವಸ್ತ್ರಗೊಳಿಸಿ, ಬಾಯಿಗೆ ಮೂತ್ರ ವಿಸರ್ಜನೆ ಮಾಡಿರುವ ಅನಾಗರಿಕ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪಾಟ್ನಾದ ಖುಸ್ರುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಅಮಾನವೀಯ ಘಟನೆ ಶನ...
ಬೆಂಗಳೂರು: ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಸುಳ್ಳು ಜಾಹೀರಾತು ನೀಡಿ ವಂಚಿಸಿದ ಬಗ್ಗೆ ಇಬ್ಬರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಧಾಮೂರ್ತಿ ಅವರ ಸಹಾಯಕರಾದ ಮಮತಾ ಸಂಜಯ್ ಅವರು ಈ ಬಗ್ಗೆ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಲಾವಣ್ಯ ಹಾಗೂ ಶ್ರು...
ಇದು ಸತ್ಯ. ಆದರೂ ನಿಮಗೆ ನಂಬಲು ಸಾಧ್ಯವಿಲ್ಲದ ಸ್ಟೋರಿ. ನೀವು ಹಿಂದಿಯಲ್ಲಿ ʼಹಮ್ ದಿಲ್ ದೆ ಚುಕೆ ಸನಮ್ʼ ಸಿನಿಮಾವನ್ನು ನೋಡಿದ್ರಾ..? ಯಾಕೆ ಅಂತಾ ನೀವು ಕೇಳ್ತಿದ್ದೀರಾ. ಈ ಚಿತ್ರದಲ್ಲಿದ್ದ ಘಟನೆಯಂತೆ ಇಲ್ಲೊಂದು ಘಟನೆ ನಿಜವಾಗಿ ನಡೆದಿದೆ. ಅದು ನೀವೂ ಊಹಿಸದ ರೀತಿಯಲ್ಲಿ. ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಪತಿ ಮದುವೆ ಮಾ...
ಬೆಂಗಳೂರು: ಸೆ.26ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಶಾಂತಿಯುತವಾಗಿ ಬಂದ್ ನಡೆಸುತ್ತೇವೆ. ನಗರದ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿವರಿಸಿದರು. ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶವನ್ನು ಖ...
ದುಬೈ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅದು 'ನೀರಿನ ಮೇಲೆ ತೇಲುವ ಮಸೀದಿ' ನಿರ್ಮಾಣ ಮಾಡುವ ಪ್ರಯತ್ನ. ಹೌದು. ದುಬೈನಲ್ಲಿ ಸ್ಪಟಿಕದಂತಹ ನೀರು ಇರುವಂತಹ ಕಾಲುವೆಗಳಲ್ಲಿ 5.5 ಕೋಟಿ ದಿರಹಂ ವೆಚ್ಚ ಮಾಡಿ ಅಂದರೆ ಸುಮಾರು 125 ಕೋಟಿ ರೂಪಾಯಿ ವೆಚ್ಚ ಮಾಡಿ ನೀರಿನ ಮೇಲೆ ತೇಲುವ ಮಸೀದಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಇಸ್ಲಾಮಿಕ...
ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರವಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ತನ್ನ ಮೊದಲ ಸಭೆ ನಡೆಸಿತು. ಇದೇ ವೇಳೆ ರಾಜಕೀಯ ಪಕ್ಷಗಳು ಹಾಗೂ ಕಾನೂನು ಆಯೋಗದಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿದೆ. ದೇಶಾದ್ಯಂತ ಲೋಕಸಭಾ ಚುನಾವಣೆಯಿಂದ ಪಂಚಾಯತ್ ಚುನಾವಣೆವರೆಗೂ ಏಕಕಾಲಕ್ಕೆ ಚುನಾವಣೆ ನಡೆಸುವ ಸಾಧ್...
ಅಮೆರಿಕದ ಜಾರ್ಜಿಯಾದ ರಾಜಧಾನಿ ಅಟ್ಲಾಂಟಾದ ಶಾಪಿಂಗ್ ಮಾಲ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಋತ್ಯ ಅಟ್ಲಾಂಟಾದ ಇವಾನ್ಸ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಅವರಲ್ಲಿ ಒಬ್ಬರು ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿದರು ಎಂದು ಪ...