ದುರಂತ ಅಂತ್ಯ: ಬಿಜೆಪಿ ಶಾಸಕರ ಮನೆಯಲ್ಲಿ ಯುವಕ ಆತ್ಮಹತ್ಯೆ; ಮೃತರ ಕುಟುಂಬ ಮಾಡಿದ ಆರೋಪವೇನು..? - Mahanayaka

ದುರಂತ ಅಂತ್ಯ: ಬಿಜೆಪಿ ಶಾಸಕರ ಮನೆಯಲ್ಲಿ ಯುವಕ ಆತ್ಮಹತ್ಯೆ; ಮೃತರ ಕುಟುಂಬ ಮಾಡಿದ ಆರೋಪವೇನು..?

25/09/2023

ಬಿಜೆಪಿ ಶಾಸಕರ ಮನೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ಬಿಜೆಪಿಯ ಶಾಸಕ ಯೋಗೇಶ್ ಶುಕ್ಲಾ ಅವರ ನಿವಾಸದಲ್ಲಿ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಹೈದರ್‌ಗಢ ಮೂಲದ ಶ್ರೇಷ್ಠ ತಿವಾರಿ (24) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಯುವಕ ಶ್ರೇಷ್ಠ ತಿವಾರಿ ಲಖನೌದ ಬಕ್ಷಿ ಕಾ ತಲಾಬ್ ಅಸೆಂಬ್ಲಿ ಕ್ಷೇತ್ರದ ಶಾಸಕ ಯೋಗೇಶ್ ಶುಕ್ಲಾ ಅವರಿಗೆ ಸಂಬಂಧಿಸಿದ ಮಾಧ್ಯಮ ತಂಡದ ಸದಸ್ಯರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕೌಟುಂಬಿಕ ಕಲಹದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಮೃತ ಯುವಕನ ಪ್ರಿಯತಮೆ ವಿರುದ್ಧ ಕಿರುಕುಳ ಹಾಗೂ ನಿಂದನೆ ಆರೋಪ ಮಾಡಿ ಮೃತರ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ದೂರು ದಾಖಲಿಸಿಕೊಂಡು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇತ್ತೀಚಿನ ಸುದ್ದಿ