ಇದು ಸತ್ಯ: ತನ್ನ ಪತ್ನಿಯನ್ನು ಪ್ರಿಯಕರನ ಜೊತೆಗೆ ಮದುವೆ ಮಾಡಿಸಿಕೊಟ್ಟ ಪತಿರಾಯ..! - Mahanayaka

ಇದು ಸತ್ಯ: ತನ್ನ ಪತ್ನಿಯನ್ನು ಪ್ರಿಯಕರನ ಜೊತೆಗೆ ಮದುವೆ ಮಾಡಿಸಿಕೊಟ್ಟ ಪತಿರಾಯ..!

25/09/2023

ಇದು ಸತ್ಯ. ಆದರೂ ನಿಮಗೆ ನಂಬಲು ಸಾಧ್ಯವಿಲ್ಲದ ಸ್ಟೋರಿ. ನೀವು ಹಿಂದಿಯಲ್ಲಿ ʼಹಮ್‌ ದಿಲ್‌ ದೆ ಚುಕೆ ಸನಮ್‌ʼ ಸಿನಿಮಾವನ್ನು ನೋಡಿದ್ರಾ..? ಯಾಕೆ ಅಂತಾ ನೀವು ಕೇಳ್ತಿದ್ದೀರಾ. ಈ ಚಿತ್ರದಲ್ಲಿದ್ದ ಘಟನೆಯಂತೆ ಇಲ್ಲೊಂದು ಘಟನೆ ನಿಜವಾಗಿ ನಡೆದಿದೆ. ಅದು ನೀವೂ ಊಹಿಸದ ರೀತಿಯಲ್ಲಿ.

ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಪತಿ ಮದುವೆ ಮಾಡಿಸಿಕೊಟ್ಟ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ. ದಂಪತಿಗೆ ಮದುವೆಯಾಗಿ ಒಂದು ವರ್ಷವಾಗಿತ್ತು. ಆದರೆ ಹೆಂಡತಿಗೆ ಮದುವೆಗೆ ಮುನ್ನವೇ ಬಿಹಾರದ ಮೂಲದ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಇತ್ತು. ಆಕೆಗೆ ಮದುವೆಯಾದರೂ ಆಕೆಯನ್ನು ನೋಡದೇ ಇರಲಾಗದ ಆಕೆಯ ಪ್ರಿಯಕರ ಆಕೆಯನ್ನು ಭೇಟಿಯಾಗಲು ಬಂದು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಯುವತಿಯ ಪ್ರಿಯಕರ ಆಕಾಶ್ ಶಾ ಆಕೆಯನ್ನು ಭೇಟಿಯಾಗಲು ಡಿಯೋರಿಯಾದಲ್ಲಿರುವ ಆಕೆಯ ಅತ್ತೆಯ ಮನೆಗೆ ಬಂದಾಗ ಈ ಸಂಬಂಧ ಬೆಳಕಿಗೆ ಬಂದಿದೆ.

ಘಟನೆಯ ಬಗ್ಗೆ ಸ್ಥಳೀಯರು ತಿಳಿಯುತ್ತಿದ್ದಂತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಸ್ಥಳೀಯರು ಆಕಾಶ್ ನನ್ನು ಹಿಡಿದು ಥಳಿಸಿದ್ದಾರೆ. ಆಕಾಶ್ ಹಾಗೂ ತನ್ನ ಪತ್ನಿ ಎರಡು ವರ್ಷದಿಂದ ಪ್ರೀತಿಸುತ್ತಿದ್ದಾರೆ ಎಂದು ಅರಿತ ಪತಿ ಗಲಾಟೆಯನ್ನ ಮಾಡದೇ ಆತನೊಂದಿಗೆ ತನ್ನ ಪತ್ನಿಯನ್ನು ಹೋಗು ಅಂದಿದ್ದಾನೆ. ಎರಡೂ ಕುಟುಂಬಗಳಿಂದ ಒಪ್ಪಿಗೆ ಪಡೆದ ನಂತರ ಆತನೇ ತನ್ನ ಹೆಂಡತಿ ಮತ್ತು ಅವಳ ಪ್ರಿಯಕರನನ್ನು ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಿಸಿದ್ದಾನೆ. ಅಲ್ಲದೇ ಆಕಾಶ್‌ ಶಾ ಬಂದಿದ್ದ ಬೈಕ್‌ನಲ್ಲೇ ಯುವ ಜೋಡಿಯನ್ನು ಪತಿ ಕಳುಹಿಸಿದ್ದಾನೆ. ಪತಿಯ ನಿರ್ಧಾರ ನೋಡಿ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

ಇತ್ತೀಚಿನ ಸುದ್ದಿ