ಹಿಂಗೂ ಇರ್ತಾರೆ: ದೇಣಿಗೆ ಹಣ ಕದಿಯುವ ಮುನ್ನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಕಳ್ಳ..! - Mahanayaka

ಹಿಂಗೂ ಇರ್ತಾರೆ: ದೇಣಿಗೆ ಹಣ ಕದಿಯುವ ಮುನ್ನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಕಳ್ಳ..!

18/03/2024


Provided by

ರಾಜಸ್ಥಾನದ ಅಲ್ವಾರ್ ಮೂಲದ ವ್ಯಕ್ತಿಯೊಬ್ಬ ದೇವಸ್ಥಾನಕ್ಕೆ ನುಗ್ಗಿ ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದಿಯುವ ಮೊದಲು ಪ್ರಾರ್ಥನೆ ಸಲ್ಲಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಂಧಿತನನ್ನು ಗೋಪೇಶ್ ಶರ್ಮಾ (37) ಎಂದು ಗುರುತಿಸಲಾಗಿದೆ. ಆತ ದೇವಾಲಯಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಶನಿವಾರ ಬೆಳಿಗ್ಗೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದು ನೋಡಿದಾಗ ಆರೋಪಿ ಶರ್ಮಾ, ಅಲ್ವಾರ್ ನ ಆದರ್ಶ್ ನಗರ ಪ್ರದೇಶದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸಿದೆ. ದೇವಾಲಯದ ಬೀಗ ಮುರಿದು ಬೆಳ್ಳಿಯ ಆಭರಣಗಳು, ಛತ್ರಿಗಳು, ದೇಣಿಗೆ ಪೆಟ್ಟಿಗೆಯಲ್ಲಿದ್ದ ಹಣ ಮತ್ತು ಇತರ ವಸ್ತುಗಳನ್ನು ಕದ್ದಿದ್ದಾನೆ.

ಅಲ್ವಾರ್ ನ ಫ್ರೆಂಡ್ಸ್ ಕಾಲೋನಿಯಲ್ಲಿರುವ ಮತ್ತೊಂದು ದೇವಾಲಯದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಅಲ್ಲಿ ವ್ಯಕ್ತಿಯೊಬ್ಬ ಪ್ರಾರ್ಥನೆ ಸಲ್ಲಿಸಿದ ನಂತರ ವಸ್ತುಗಳನ್ನು ಕದಿಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳತನದ ವೀಡಿಯೊ ವೈರಲ್ ಆದ ನಂತರ ಸಿಸಿಟಿವಿ ದೃಶ್ಯಾವಳಿಗಳಿಂದ ಗೋಪೇಶ್ ಶರ್ಮಾನನ್ನು ಗುರುತಿಸಿದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಆತ ಹಲವಾರು ದೇವಾಲಯಗಳಲ್ಲಿ ಇದೇ ರೀತಿಯ ಕಳ್ಳತನಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ