ಜಾತಿ ಜನಗಣತಿ ಬಗ್ಗೆ ಕೇಂದ್ರ ಸರ್ಕಾರ ಸಕಾರಾತ್ಮಕ ಕ್ರಮಕೈಗೊಳ್ಳಬೇಕು: ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ - Mahanayaka
8:06 AM Saturday 18 - October 2025

ಜಾತಿ ಜನಗಣತಿ ಬಗ್ಗೆ ಕೇಂದ್ರ ಸರ್ಕಾರ ಸಕಾರಾತ್ಮಕ ಕ್ರಮಕೈಗೊಳ್ಳಬೇಕು: ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ

mayawati
02/12/2023

ನವದೆಹಲಿ: ಜಾತಿ ಜನಗಣತಿ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರವನ್ನು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಒತ್ತಾಯಿಸಿದ್ದಾರೆ.


Provided by

ಚಳಿಗಾಲದ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಈ ಒತ್ತಾಯ ಮಾಡಲಾಗಿದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಜಾತಿಗಣತಿ ಮೂಲಕ ತನ್ನ ಅಪರಾಧಗಳನ್ನು ಮುಚ್ಚಿಡಲು ಹೊರಟಿದೆ, ಸಾರ್ವಜನಿಕರ ಭಾವನೆಗಳನ್ನು ತೃಪ್ತಿಪಡಿಸಲು ಅರೆ ಮನಸ್ಸಿನಿಂದ ವಿವಿಧ ರಾಜ್ಯಗಳು ಪ್ರಯತ್ನಿಸುತ್ತಿವೆ. ಆದ್ರೆ ಕೇಂದ್ರ ಸರ್ಕಾರವು ಸರಿಯಾದ  ಜಾತಿಗಣತಿಯ ಮೂಲಕ ನಿಜವಾದ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಾತಿಗಣತಿ ನಡೆಸಲು ದೇಶದ ಮೂಲೆ ಮೂಲೆಗಳಿಂದ ಬೇಡಿಕೆ ಹೆಚ್ಚುತ್ತಿದೆ.  ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ