ಚೈತ್ರಾ ಕುಂದಾಪುರಗೆ ಹೊಸ ಹೆಸರು ನಾಮಕರಣ!

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ(Chaithra Kundapura) ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 12 ವರ್ಷಗಳಿಂದ ಪ್ರೀತಿಸಿದ ಶ್ರೀಕಾಂತ್ ಕಶ್ಯಪ್ ಎಂಬವರೊಂದಿಗೆ ಶಾಸ್ತ್ರೋಕ್ತವಾಗಿ ವಿವಾಹ ನಡೆದಿತ್ತು.
ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಕಶ್ಯಪ್ ಅವರು 12 ವರ್ಷಗಳ ಕಾಲ ಪ್ರೀತಿಸಿದ್ದರು. ಬಳಿಕ ಈ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.
ಕರಾವಳಿ ಭಾಗದಲ್ಲಿ ಒಂದು ಸಂಪ್ರದಾಯವಿದೆ. ಈ ಸಂಪ್ರದಾಯದ ಪ್ರಕಾರ ಮದುವೆಯಾಗಿ ಗಂಡನ ಮನೆಗೆ ಬರುವ ಹುಡುಗಿಗೆ ವರನ ಮನೆಯ ಕಡೆಯವರು ಹೊಸ ಹೆಸರನ್ನು ಇಡುತ್ತಾರೆ. ಈ ರೀತಿಯಾಗಿ ಚೈತ್ರಾ ಕುಂದಾಪುರಗೆ ಕೂಡ ಹೊಸ ಹೆಸರನ್ನು ಇಡಲಾಗಿದೆಯಂತೆ.
ಮದುವೆಯ ಬಳಿಕ ಶ್ರೀಕಾಂತ್ ಕಶ್ಯಪ್ ತಾಯಿ ಚೈತ್ರಾಗೆ ಶ್ರೀಮೇಧಾ ಎಂದು ನಾಮಕರಣ ಮಾಡಿದ್ದಾರಂತೆ. ವಧುವಿಗೆ ಬಾಳೆ ಹಣ್ಣು ತಿನ್ನಿಸಿದ ಬಳಿಕ ವರನ ತಾಯಿ ಹೊಸ ಹೆಸರು ಇಡುತ್ತಾರೆ. ಮನೆಗೆ ಮಗಳಾಗಿ ಬರುವಾಗ ಹೊಸ ನಾಮಕರಣ ಮಾಡುವ ಸಂಪ್ರದಾಯ ಇದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD