ವಿದ್ಯಾರ್ಥಿಗಳ ಜೊತೆ ಮೊಟ್ಟೆ, ಬಾತ್ ಸೇವಿಸಿದ ಚಾಮರಾಜನಗರ ಶಾಸಕ - Mahanayaka
12:11 PM Wednesday 27 - August 2025

ವಿದ್ಯಾರ್ಥಿಗಳ ಜೊತೆ ಮೊಟ್ಟೆ, ಬಾತ್ ಸೇವಿಸಿದ ಚಾಮರಾಜನಗರ ಶಾಸಕ

puttaranga shetty
22/08/2023


Provided by

ಚಾಮರಾಜನಗರ: 9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಕಡ್ಲೆ ಮಿಠಾಯಿ ವಿತರಿಸುವ ಸರ್ಕಾರದ ಯೋಜನೆಗೆ ಚಾಮರಾಜನಗರದ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ಸಿ‌.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

ಯೋಜನೆಯಿಂದ 80 ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಪಡೆಯಲಿದ್ದಾರೆ. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳು ಬಾಳೆಹಣ್ಣು, ಕಡ್ಲೆ ಮಿಠಾಯಿ ಸೇವನೆ ಮಾಡಬಹುದು.ಸಿದ್ದರಾಮಯ್ಯ ಉಚಿತ ಭಾಗ್ಯಗಳ ಹರಿಕಾರ. ಕಷ್ಟದಿಂದ ಬಂದವರಿಗೆ ಮಾತ್ರ ಬಡವರ ಕಷ್ಟ ಗೊತ್ತಾಗೋದು, ಸಿದ್ದರಾಮಯ್ಯ ಅವರು ಕಷ್ಟದಿಂದ ಬಂದವರು.ಅದಕ್ಕೆ ಬಡವರಿಗಾಗಿ ಉಚಿತ ಭಾಗ್ಯ ನೀಡಿದ್ದಾರೆ ಎಂದರು.

ಸರ್ಕಾರಿ ಮಕ್ಕಳಿಗೆ ಸಿದ್ದರಾಮಯ್ಯ ಎಲ್ಲ ರೀತಿಯ ಭಾಗ್ಯ ನೀಡುತ್ತಿದ್ದಾರೆ, ಶೂ ,ಮೊಟ್ಟೆ , ಬಾಳೆ ಹಣ್ಣು ಇವೆಲ್ಲವೂ ಭಾಗ್ಯಗಳೆ, ಸಿದ್ದರಾಮಯ್ಯ ಆರ್ಥಿಕ ತಜ್ಞರು, ಆರ್ಥಿಕತೆ ಸರಿಪಡಿಸುವುದರಲ್ಲಿ ಪಂಡಿತರು, ಸರ್ಕಾರಿ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಿಸುವ ಬಗ್ಗೆ ಸರ್ಕಾರದ ಜತೆ ಚರ್ಚೆ ಮಾಡುತ್ತೇನೆ ಎಂದರು.

ಇತ್ತೀಚಿನ ಸುದ್ದಿ