ದಾಖಲೆ ಬಿಡುಗಡೆಗೆ ಚಂದ್ರಯಾನ ಅಡ್ಡಿ!?: ಕುಮಾರಸ್ವಾಮಿ ಹೇಳಿದ್ದೇನು?

ಬೆಂಗಳೂರು: ನೈಸ್ ರಸ್ತೆ ಹಗರಣದ ದಾಖಲೆ ಬಿಡುಗಡೆಗೆ ಸಮಸ್ಯೆ ಇದೆ. ಚಂದ್ರಯಾನ ಇರುವ ಕಾರಣ ಜನರ ಗಮನ ಆ ಕಡೆ ಇರುತ್ತದೆ, ಹೀಗಾಗಿ ನಾನು ದಾಖಲೆ ಬಿಡುಗಡೆ ಮಾಡಿದ್ರೆ ಜನರಿಗೆ ತಲುಪೋದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನೈಸ್ ರಸ್ತೆ ದೇವೇಗೌಡರ ಪಾಪದ ಕೂಸು ಅಂತೀರಾ? ಆದ್ರೆ, ನೈಸ್ ನ ಉದ್ದೇಶವೇನು? ಟೌನ್ ಶಿಪ್ ಯಾವ ರೀತಿ ಇರಬೇಕು? ಅವರು ಮಾಡಿದ್ದೇನು? ರಸ್ತೆ ಯಾವ ರೀತಿ ಇರಬೇಕು ಅಂತ ದೇವೇಗೌಡರು ಒಪ್ಪಂದ ಮಾಡಿದ್ದರು. ಆದ್ರೆ ಇವರು ಏನು ಮಾಡಿದ್ದಾರೆ? ಇವರ ಮಹಾನ್ ಸಾಧನೆ ಬಗ್ಗೆ ಬಿಡುಗಡೆ ಮಾಡುತ್ತೇನೆ ಎಂದರು.
ಟಿ.ಬಿ.ಜಯಚಂದ್ರ ಅವರು ಯೋಜನೆಯಲ್ಲಾದ ಅಕ್ರಮದ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನೀವು ರೈತರ ಪರವಾಗಿದ್ದರೆ, ಆ ಜಮೀನು ವಾಪಸ್ ಪಡೆದು ರೈತರಿಗೆ ನೀಡಿ ಎಂದು ನಾನು ಸಿಎಂ ಸಿದ್ದರಾಮಯ್ಯನವರಿಗೆ ಒತ್ತಾಯಿಸುತ್ತೇನೆ ಎಂದರು.
ನೈಸ್ ಹೆಸರಿನಲ್ಲಿ ಡಿ.ಕೆ.ಸಹೋದರರು ಕೊಳ್ಳೆ ಹೊಡೆದಿರುವ ರೈತರ ಭೂಮಿ ಹಾಗೂ ಅಕ್ರಮಗಳ ಬಗ್ಗೆ ಬುಧವಾರ ದಾಖಲೆ ಬಿಡುಗಡೆ ಮಾಡುವುದಾಗಿ ಕುಮಾರ ಸ್ವಾಮಿ ಹೇಳಿಕೆ ನೀಡಿದ್ದರು.