ಮುಖ್ಯಮಂತ್ರಿ ಬದಲಾವಣೆ: ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದಿಷ್ಟು…!

ಉಡುಪಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ. ಮಿಕ್ಕಿದ್ದೆಲ್ಲ ಅಪ್ರಸ್ತುತ. ಬದಲಾವಣೆಗಳಿದ್ದರೆ, ಸಂದರ್ಭ ಬಂದಾಗ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ
ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಬಿಜೆಪಿ ಕಾಯ್ದುಕೊಂಡು ಇರಲಿ. ಇನ್ನು ಐದು ವರ್ಷ ಕಾದುಕೊಂಡಿರಲಿ ಎಂದು ರಾಜ್ಯದ ಜನರೇ ತೀರ್ಮಾನಿಸಿದ್ದಾರೆ ಎಂದರು
ಸರಕಾರದ ಅಧಿಕಾರ ಹಂಚಿಕೆ ಎರಡುವರೆ ವರ್ಷ, ಒಂದು ಕಾಲು ವರ್ಷ ಎಂದು ಮಾಧ್ಯಮಗಳು ಹೇಳುತ್ತವೆ. ನಮ್ಮಲ್ಲಿ ಯಾವುದೇ ಅಂತಹ ಚರ್ಚೆ ಇಲ್ಲ, ಎಲ್ಲ ಮಾಧ್ಯಮಗಳ ಸೃಷ್ಟಿ. ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಈ ಬಗ್ಗೆ ಏನಾದರೂ ಹೇಳಿದ್ದಾರಾ?. ಕೇವಲ ಊಹೆಯ ಮೇಲೆ ಚರ್ಚೆಯಾಗುತ್ತಿದೆ ಎಂದು ತಿಳಿಸಿದ್ದಾರೆ
ಸತೀಶ್ ಜಾರಕಿಹೊಳಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತೀಶ್ ಜಾರಕಿಹೊಳಿ ಸಮಾಧಾನವಾಗಿದ್ದಾರೆ ಅವರಿಗೆ ಏನಾಗಿದೆ?. ಮನೆಯಲ್ಲಿ ಊಟ ಮಾಡೋದು ತಪ್ಪೇನ್ರಿ?. ಈ ವಿಶೇಷ ಅರ್ಥಗಳನ್ನು ಯಾಕೆ ಕಲ್ಪಿಸುತ್ತೀರಿ?. ಬೆಳಗಾವಿಯಲ್ಲಿ ಏನಾಗಿದೆ ಎಲ್ಲವೂ ಸರಿಯಾಗಿದೆ. ಚೆನ್ನಾಗಿ ಅಧಿಕಾರ ನಡೆಸುತ್ತಿದ್ದೇವೆ ಎಂದರು.
ರಾಷ್ಟ್ರೀಯ ಚಿಂತಕರು, ಬಿಜೆಪಿ ಶಾಸಕರಿಗೆ ಕಿರುಕುಳ ನಳಿನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಬಿಜೆಪಿಯವರನ್ನು ಕೇಳಿಕೊಂಡು ಆಡಳಿತ ಮಾಡ್ತಾ ಇಲ್ಲ. ಅವರ ಮುಖಂಡರನಾಗಲಿ ಪಕ್ಷವನ್ನಾಗಲಿ ಕೇಳಿಕೊಂಡು ಆಡಳಿತ ಮಾಡ್ತಾ ಇಲ್ಲ ಅನ್ನೋದು ಸ್ಪಷ್ಟ. ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯ ಸಲಹೆ ಕೊಟ್ಟರೆ ಪರಿಗಣಿಸಬಹುದು. ಟೀಕೆ ಟಿಪ್ಪಣಿ ಮಾಡುವುದು ಬಿಡಿ, ರಾಜ್ಯದ ಹಿತ ದೃಷ್ಟಿಯಿಂದ ಸಲಹೆ ಕೊಡಿ ಎಂದು ಹೇಳಿದ್ದಾರೆ.