ಮಿಸ್ ಇಂಡಿಯಾ ಚೆಕ್ ಲಿಸ್ಟ್ ನಲ್ಲಿ ದಲಿತ, ಬುಡಕಟ್ಟು, ಒಬಿಸಿ ಮಹಿಳೆಯರೇ ಇಲ್ಲ: ರಾಹುಲ್ ಗಾಂಧಿ ಹೇಳಿಕೆ - Mahanayaka
2:10 PM Tuesday 16 - September 2025

ಮಿಸ್ ಇಂಡಿಯಾ ಚೆಕ್ ಲಿಸ್ಟ್ ನಲ್ಲಿ ದಲಿತ, ಬುಡಕಟ್ಟು, ಒಬಿಸಿ ಮಹಿಳೆಯರೇ ಇಲ್ಲ: ರಾಹುಲ್ ಗಾಂಧಿ ಹೇಳಿಕೆ

25/08/2024

ಕಾಂಗ್ರೆಸ್ ಮುಖಂಡ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರವ್ಯಾಪಿ ಜಾತಿ ಜನಗಣತಿಗೆ ಕರೆ ನೀಡಿದರು. “ಮಿಸ್ ಇಂಡಿಯಾ ಸ್ಪರ್ಧೆಯ ಪಟ್ಟಿಯಲ್ಲಿ” ದಲಿತ, ಬುಡಕಟ್ಟು ಅಥವಾ ಇತರ ಹಿಂದುಳಿದ ವರ್ಗಗಳ ಸಮುದಾಯಗಳ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.


Provided by

ಪ್ರಯಾಗ್ ರಾಜ್‌ನಲ್ಲಿ ನಡೆದ ಸಂವಿಧಾನ್ ಸಮ್ಮಾನ್ ಸಮ್ಮೇಳನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮಿಸ್ ಇಂಡಿಯಾದಲ್ಲಿ ಯಾವುದೇ ದಲಿತ ಅಥವಾ ಬುಡಕಟ್ಟು ಮಹಿಳೆ ಇರುತ್ತಾರೆಯೇ ಎಂದು ನೋಡಲು ನಾನು ಮಿಸ್ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದೆ. ಆದರೆ ದಲಿತ, ಬುಡಕಟ್ಟು ಅಥವಾ ಒಬಿಸಿಯ ಯಾವುದೇ ಮಹಿಳೆಯರು ಇರಲಿಲ್ಲ” ಎಂದು ಹೇಳಿದರು.

ರೈತರು ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ವಹಿಸದ ಮಾಧ್ಯಮಗಳನ್ನು ಟೀಕಿಸಿದ ಅವರು, “ಇನ್ನೂ ಮಾಧ್ಯಮಗಳು ನೃತ್ಯ, ಸಂಗೀತ, ಕ್ರಿಕೆಟ್, ಬಾಲಿವುಡ್ ಬಗ್ಗೆ ಮಾತನಾಡುತ್ತವೆ ಆದರೆ ರೈತರು ಮತ್ತು ಕಾರ್ಮಿಕರ ಬಗ್ಗೆ ಮಾತನಾಡುವುದಿಲ್ಲ” ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರಚಿಸಿದಾಗ ಜಾತಿ ಗಣತಿ ನಡೆಸಿ ಮೀಸಲಾತಿಯ ಮೇಲಿನ ಶೇಕಡಾ 50 ರ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಅವರು ಪ್ರತಿಪಾದಿಸಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ