ಚಾಲಕನಿಗೆ ಎದೆ ನೋವು: ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ ಚಾಲಕ - Mahanayaka
7:05 AM Wednesday 17 - December 2025

ಚಾಲಕನಿಗೆ ಎದೆ ನೋವು: ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ ಚಾಲಕ

chikkamagaluru
05/06/2024

ಕೊಟ್ಟಿಗೆಹಾರ: ಮೂಡಿಗೆರೆಯಿಂದ ಮತ್ತಿಕಟ್ಟೆಗೆ ಸಾಗುವ ಸರ್ಕಾರಿ ಬಸ್  ನ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ ಬಣಕಲ್ ನಲ್ಲಿ ಬಸ್ ನಿಲ್ಲಿಸಿ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.

ಬಸ್ ಮೂಡಿಗೆರೆಯಿಂದ ಮತ್ತಿಕಟ್ಟೆ, ಬಾಳೂರು ಹೊರಟ್ಟಿಗೆ ತೆರಳಿ ಶಾಲಾ ಮಕ್ಕಳು ಹಾಗೂ ಇತರೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುವಾಗ ಬಾಳೂರು ಹೊರಟ್ಟಿ ಮಾರ್ಗದಲ್ಲಿ ಬರುವಾಗ ಎದೆ ನೋವು ಕಾಣಿಸಿಕೊಂಡಿದೆ.ಅಲ್ಲಿಂದ ಬಣಕಲ್ ಗೆ ಕೆಲವೇ ಕಿ.ಮಿ.ಅಂತರ ಇರುವುದರಿಂದ ಚಾಲಕ  ಗಂಗಾಧರ ಬಸ್ ನಿಧಾನವಾಗಿ ಚಲಾಯಿಸಿ ಬಣಕಲ್ ಪೇಟೆ ಬರುತ್ತಿದ್ದಂತೆ ಬಸ್ ನಿಲ್ಲಿಸಿ ಸಮಾಜ ಸೇವಕ ಆರೀಫ್ ಅವರ ಸಹಾಯ ಪಡೆದು ಬಣಕಲ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಡಾ.ಇಕ್ಲಾಸ್ ಅಹಮ್ಮದ್ ಬಳಿ ಆರೋಗ್ಯ ತಪಾಸಣೆ ಮಾಡಿಸಿ ಪ್ರಥಮ ಚಿಕಿತ್ಸೆ ಪಡೆದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಾಲಕನ ಸಮಯ ಪ್ರಜ್ಞೆಯಿಂದ ಶಾಲಾ ಮಕ್ಕಳ ಹಾಗೂ ಹಲವು ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ನಡೆದಿದೆ.ಬಸ್ ನಲ್ಲಿ ಸುಮಾರು 60 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ